ಬುಧವಾರ, ಜೂನ್ 16, 2021
22 °C

ಕೋವಿಡ್‌: ಒಂದು ಸೆಕೆಂಡ್‌ನಲ್ಲಿ ಫಲಿತಾಂಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೊಲ್ಲಿನ ಮಾದರಿಯ ಪರೀಕ್ಷೆ ಕೈಗೊಳ್ಳುವ ಮೂಲಕ ಕೇವಲ ಒಂದು ಸೆಕೆಂಡ್‌ನಲ್ಲಿ ಕೋವಿಡ್‌–19 ಸೋಂಕು ಇರುವುದನ್ನು ಪತ್ತೆ ಮಾಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ವಿನೂತನ ಪರೀಕ್ಷೆಗೆ ಸೆನ್ಸರ್‌ ವ್ಯವಸ್ಥೆಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ, ಈಗಿರುವ ಪರೀಕ್ಷಾ ಪದ್ಧತಿಗಳಿಂದಲೂ ಅತಿ ವೇಗದಲ್ಲಿ ಫಲಿತಾಂಶ ದೊರೆಯಲಿದೆ.

‘ವ್ಯಾಕ್ಯುಮ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಬಿ’ ನಿಯತಕಾಲಿಕೆಯಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಲಾಗಿದೆ.

‘ಎಲೆಕ್ರೋಡ್‌ಗಳ ಮೇಲೆ ಜೊಲ್ಲಿನ ಮಾದರಿಯನ್ನು ಹಾಕಲಾಗುತ್ತದೆ. ಇದನ್ನು ಸೆನ್ಸರ್‌ ಪಟ್ಟಿಗಳನ್ನು ಕನೆಕ್ಟರ್‌ ಮೂಲಕ ಸರ್ಕ್ಯೂಟ್‌ ಬೋರ್ಡ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಇಲ್ಲಿ ದೊರೆಯುವ ಫಲಿತಾಂಶವನ್ನು ವಿಶ್ಲೇಷಿಸಲಾಗುತ್ತದೆ’ ಎಂದು ಲೇಖಕ ಮಿಂಘಾನ್‌ ಷಿಯಾನ್‌ ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು