ಬುಧವಾರ, ಮೇ 18, 2022
28 °C

ಚೀನಾದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ: ವಿಶ್ವವಿದ್ಯಾಲಯದಲ್ಲಿ ಲಾಕ್‌ಡೌನ್‌

ಎಪಿ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಚೀನಾದ ವಾಯವ್ಯ ಭಾಗದಲ್ಲಿರುವ ಡೇಲಿಯನ್‌ ನಗರದ ವಿಶ್ವವಿದ್ಯಾಲಯವೊಂದರಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ 1500 ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಲ್ಲಿ ಮತ್ತು ಹೊಟೆಲ್‌ಗಳಲ್ಲಿ ಉಳಿಯುವಂತೆ ಚೀನಾ ಸರ್ಕಾರ ಆದೇಶಿಸಿದೆ.

ನಗರದ ಜುವಾಂಗ್ ವಿಶ್ವವಿದ್ಯಾಲಯ ಹಲವು ಕೋವಿಡ್‌ ಪ್ರಕರಣಗಳು ವರದಿಯಾದ ನಂತರ ನೂರಾರು ವಿದ್ಯಾರ್ಥಿಗಳನ್ನು ವೀಕ್ಷಣೆಗಾಗಿ ಹೋಟೆಲ್‌ಗಳಿಗೆ ವರ್ಗಾಯಿಸಲಾಗಿತ್ತು. ಇದಾದ ಬಳಿಕ ಚೀನಾ ಸರ್ಕಾರ ಭಾನುವಾರ ಈ ಆದೇಶ ಹೊರಡಿಸಿದೆ.

‌ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಹಾಜರಾಗುತ್ತಿದ್ದು, ಊಟ, ಉಪಹಾರವನ್ನು ಅವರ ಕೊಠಡಿಗಳಿಗೆ ತಲುಪಿಸಲಾಗುತ್ತಿದೆ.

ಕೋವಿಡ್ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸುವುದಕ್ಕೆ ಚೀನಾ ಸರ್ಕಾರ ಏಕಾಏಕಿ ಲಾಕ್‌ಡೌನ್‌ ಘೋಷಿಸಿದ್ದು, ಇದು ಜನರ ಜೀವನ ಮತ್ತು ಜೀವನೋಪಾಯಕ್ಕೆ ಸಾಕಷ್ಟು ಅಡ್ಡಿ ಉಂಟು ಮಾಡಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು