ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಸ್ಥಾವರದ ಮೇಲೆ ದಾಳಿ ನಿಲ್ಲಿಸುವಂತೆ ರಷ್ಯಾಗೆ ಮನವಿ ಮಾಡಿದ ಉಕ್ರೇನ್‌

Last Updated 4 ಮಾರ್ಚ್ 2022, 2:10 IST
ಅಕ್ಷರ ಗಾತ್ರ

ಕೀವ್‌: ರಷ್ಯಾ ಪಡೆಯ ನಿರಂತರ ಶೆಲ್‌ದಾಳಿ ಪರಿಣಾಮ ಈಗಾಗಲೇ ಯೂರೋಪ್‌ನ ಅತಿದೊಡ್ಡ ಝಪೊರಿಝ್ಯಾ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಬೆಂಕಿ ಬಿದ್ದಿರುವ ಬೆನ್ನಲ್ಲೇ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ತಕ್ಷಣ ಪರಮಾಣು ಸ್ಥಾವರ ಘಟಕಗಳ ಮೇಲೆ ದಾಳಿಯನ್ನು ನಿಲ್ಲಿಸುವಂತೆ ರಷ್ಯಾ ಪಡೆಗೆ ಮನವಿ ಮಾಡಿದ್ದಾರೆ.

'ಝಪೊರಿಝ್ಯಾ ಪರಮಾಣು ವಿದ್ಯುತ್‌ ಸ್ಥಾವರವನ್ನು ಸುತ್ತುವರಿದಿರುವ ರಷ್ಯಾದ ಸೇನೆ ಎಲ್ಲಾ ಭಾಗಗಳಿಂದ ದಾಳಿ ನಡೆಸುತ್ತಿದೆ. ಇದು ಯೂರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್‌ ಸ್ಥಾವರ. ಈಗಾಗಲೇ ಬೆಂಕಿ ಬಿದ್ದಿದೆ. ಇದು ಸ್ಫೋಟಗೊಂಡರೆ 'ಚರ್ನೋಬಿಲ್‌ ದುರಂತ'ಕ್ಕಿಂತ 10 ಪಟ್ಟು ದೊಡ್ಡ ದುರಂತ ಸಂಭವಿಸಲಿದೆ. ರಷ್ಯಾ ಪಡೆ ತಕ್ಷಣ ಪರಮಾಣು ಸ್ಥಾವರ ಘಟಕಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕು. ಅಗ್ನಿಶಾಮಕ ಪಡೆಗೆ ಬೆಂಕಿಯನ್ನು ಆರಿಸಲು ಬಿಡಬೇಕು. ಭದ್ರತಾ ವಲಯವನ್ನು ಸ್ಥಾಪಿಸಬೇಕು' ಎಂದು ಡಿಮಿಟ್ರೊ ಕುಲೆಬಾ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಶುಕ್ರವಾರ ಬೆಳಗಿನ ಜಾವ ಝಪೊರಿಝ್ಯಾ ಪರಮಾಣು ಸ್ಥಾವರದ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಉಕ್ರೇನ್‌ ಆಗ್ನೇಯ ಭಾಗದಲ್ಲಿರುವ ಝಪೊರಿಝ್ಯಾ ಪರಮಾಣು ಸ್ಥಾವರ ಘಟಕದಿಂದ ದೇಶಕ್ಕೆ ಶೇಕಡಾ 40ರಷ್ಚು ಪರಮಾಣು ವಿದ್ಯುತ್ ಪೂರೈಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.

1986ರ 'ಚರ್ನೋಬಿಲ್‌ ದುರಂತ'ದ ಪ್ರದೇಶವೂ ಸೇರಿದಂತೆ ಉಕ್ರೇನ್‌ನ ಪರಮಾಣು ವಿದ್ಯುತ್‌ ಘಟಕಗಳ ಮೇಲೆ ಎಲ್ಲ ಬಗೆಯ ದಾಳಿಯನ್ನು ನಿಲ್ಲಿಸುವಂತೆ ರಷ್ಯಾಗೆ ಈಗಾಗಲೇ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ವಿದ್ಯುತ್‌ ಏಜೆನ್ಸಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT