ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಚಿ ಕ್ಲಿನಿಕ್‌ನಲ್ಲಿ ಗುಂಡಿನ ದಾಳಿ: ಚೀನಿ ಪ್ರಜೆ ಸಾವು, ಇಬ್ಬರಿಗೆ ಗಾಯ

Last Updated 28 ಸೆಪ್ಟೆಂಬರ್ 2022, 15:52 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ ಕರಾಚಿಯದಂತ ಚಿಕಿತ್ಸಾಲಯವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಚೀನಾ ಪ್ರಜೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಚೀನಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂತ ಚಿಕಿತ್ಸೆಗೆ ಬಂದಿರುವುದಾಗಿ ಹೇಳಿಕೊಂಡು ಕರಾಚಿಯ ಸದ್ದಾರ್ ಪ್ರದೇಶದ ಕ್ಲಿನಿಕ್ ಒಳಗೆ ಪ್ರವೇಶಿಸಿದ ವ್ಯಕ್ತಿ, ವೈದ್ಯರ ಕೊಠಡಿಯತ್ತ ಗುಂಡಿನ ದಾಳಿ ನಡೆಸಿದ್ದಾನೆ.

‌‘ವೈದ್ಯರ ಸಹಾಯಕ ರೊನಾಲ್ಡ್ ಚೌ ಸ್ಥಳದಲ್ಲೇ ಮೃತಪಟ್ಟಿದ್ದು, ವೈದ್ಯ ರಿಚರ್ಡ್ ಹು ಲೀ(74), ಅವರ ಪತ್ನಿ ಮಾರ್ಗರೇಟ್‌(72) ಗಾಯಗೊಂಡಿದ್ದಾರೆ’ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿರುವ ವೈದ್ಯರು ಮತ್ತು ಅವರ ಪತ್ನಿ ಬಹಳ ದೀರ್ಘಾವಧಿಯಿಂದ ಕ್ಲಿನಿಕ್ ನಡೆಸುತ್ತಿದ್ದರು. ಅವರಿಗೆ ಯಾವುದೇ ಜೀವ ಬೆದರಿಕೆ ಬಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯರು ಮತ್ತು ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸದ್ದಾರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಬಶೀರ್ ಅಹ್ಮದ್ ತಿಳಿಸಿದ್ದಾರೆ.

ದಾಳಿಕೋರರ ಶೀಘ್ರ ಬಂಧನಕ್ಕೆ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರದ್ ಅಲಿ ಶಾ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT