ಇಸ್ಲಾಮಾಬಾದ್: ‘ಅಫ್ಗಾನಿಸ್ತಾನದಲ್ಲಿ ದಿನೇ ದಿನೇ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು ಮುನ್ನೆಚ್ಚರಿಕಾ ಕ್ರಮವಾಗಿ ಅಫ್ಗಾನಿಸ್ತಾನದೊಂದಿಗಿನ ತನ್ನ ಗಡಿಯ ಮುಂಚೂಣಿ ಠಾಣೆಗಳಲ್ಲಿ ಸೇನಾ ಪಡೆಯನ್ನು ನಿಯೋಜಿಸಿದೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಫ್ರಂಟಿಯರ್ ಕಾನ್ಸ್ಟಾಬ್ಯುಲರಿ (ಎಫ್ಸಿ), ಅರೆಸೇನಾಪಡೆಯ ಬದಲಿಗೆ ಪಾಕಿಸ್ತಾನಿ ಸೇನೆಯನ್ನು ನಿಯೋಜಿಸಲಾಗಿದೆ ಎಂಬುದಾಗಿ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ’ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

‘ಅಫ್ಗಾನಿಸ್ತಾನದಿಂದ ನ್ಯಾಟೊ ಮತ್ತು ಅಮೆರಿಕದ ಸೇನೆಗಳನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆ ಇನ್ನೇನು ಪೂರ್ಣಗೊಳ್ಳಲಿದೆ. ಇದರ ಬೆನ್ನಲ್ಲೇ ಅಫ್ಗಾನಿಸ್ತಾನದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಕೇವಲ ನಿರಾಶ್ರಿತರು ಮಾತ್ರವಲ್ಲದೇ ಸೇನೆ ಸಿಬ್ಬಂದಿ ಮತ್ತು ಉಗ್ರರು ಪಾಕಿಸ್ತಾನ ಪ್ರವೇಶಿಸುವ ಸಾಧ್ಯತೆಯಿದೆ. ಈ ದೃಷ್ಟಿಯಿಂದ ಅರೆಸೇನಾಪಡೆ ಬದಲಿಗೆ ಸೇನೆಯನ್ನು ಗಡಿಯಲ್ಲಿ ನಿಯೋಜಿಸಲಾಗಿದೆ’ ಎಂದು ಸಚಿವ ಶೇಖ್ ರಶೀದ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.