ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್‌ಗೆ ಭದ್ರತೆ ಒದಗಿಸಲು ಶಹಬಾಝ್‌ ಸೂಚನೆ

Last Updated 21 ಏಪ್ರಿಲ್ 2022, 11:09 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌, ಪಾಕಿಸ್ತಾನ: ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ, ಅವರಿಗೆ ಪೂರ್ಣ ಪ್ರಮಾಣದ ಭದ್ರತೆ ನೀಡುವಂತೆ ನೂತನ ಪ್ರಧಾನಿ ಶಾಹಬಾಝ್ ಷರೀಫ್‌ ಆಂತರಿಕ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿದ್ದಾರೆ.

ತೆಹ್ರೀಕ್‌–ಎ–ಇನ್ಸಾಫ್‌ ಪಕ್ಷ ಲಾಹೋರ್‌ನ ಮಿನಾರ್‌–ಇ–ಪಾಕಿಸ್ತಾನ್ ನಲ್ಲಿ ಕೈಗೊಳ್ಳಲಿರುವ ರ‍್ಯಾಲಿಯಲ್ಲಿ ಪದಚ್ಯುತ ಪ್ರಧಾನಿಇಮ್ರಾನ್‌ ಖಾನ್‌ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರ‍್ಯಾಲಿಯ ವೇಳೆ ಇಮ್ರಾನ್‌ ಅವರಿಗೆ ಅಪಾಯವಾಗುವ ಸಂಭವ ಇದೆ ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಸಿದ್ದವು.

ಜೀವ ಬೆದರಿಕೆಯ ಮಾಹಿತಿ ಸಿಗುತ್ತಲೇ ಇಮ್ರಾನ್‌ ಅವರು, ವಿಡಿಯೊ ಕಾನ್ಫರೆನ್ಸ್‌ ಮೂಲಕಭಾಷಣ ಮಾಡುವುದಾಗಿ ತಿಳಿಸಿದ್ದರು. ಆದರೆ ಇಮ್ರಾನ್‌ ಅವರ ಬೆಂಬಲಿಗರು, ಇದನ್ನು ಒಪ್ಪಿರಲಿಲ್ಲ. ಆದ್ದರಿಂದ ಇಮ್ರಾನ್‌ ಭೌತಿಕವಾಗಿ ‍ರ್‍ಯಾಲಿಯಲ್ಲಿ ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT