ಗುರುವಾರ , ಜನವರಿ 28, 2021
27 °C

ಪಾಕಿಸ್ತಾನದಲ್ಲಿ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಶಿಕ್ಷೆ: ಏನಿದು?

ಪಿಟಿಐ Updated:

ಅಕ್ಷರ ಗಾತ್ರ : | |

Imran khan

ಇಸ್ಲಾಮಾಬಾದ್: ಅತ್ಯಾಚಾರಿಗಳಿಗೆ ರಾಸಾಯನಿಕ ಬಳಸಿ ಪುರುಷತ್ವ ಹರಣ ಮಾಡುವುದು (ಕೆಮಿಕಲ್ ಕ್ಯಾಸ್ಟ್ರೇಶನ್) ಮತ್ತು ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ಎರಡು ಸುಗ್ರೀವಾಜ್ಞೆಗಳಿಗೆ ಪಾಕಿಸ್ತಾನ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕಾನೂನು ಸಚಿವ ಫರೋಗ್ ನಸೀಮ್ ನೇತೃತ್ವದ ಸಚಿವ ಸಂಪುಟ ಸಮಿತಿಯು ‘ಅತ್ಯಾಚಾರ ತಡೆ (ತನಿಖೆ ಮತ್ತು ವಿಚಾರಣೆ) ಸುಗ್ರೀವಾಜ್ಞೆ 2020’ ಹಾಗೂ ‘ಅಪರಾಧ ಕಾನೂನು (ತಿದ್ದುಪಡಿ) ಸುಗ್ರೀವಾಜ್ಞೆ 2020’ಗೆ ಗುರುವಾರ ಅನುಮೋದನೆ ನೀಡಿದೆ ಎಂದು ‘ಡಾನ್ ನ್ಯೂಸ್’ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: 

ಮೊದಲ ಬಾರಿಯ ಹಾಗೂ ಪುನರಾವರ್ತಿತ ಅಪರಾಧಿಗಳನ್ನು ಸಾಮಾನ್ಯ ಜೀವನಕ್ಕೆ ಮರುರೂಪಿಸುವ ಪ್ರಕ್ರಿಯೆಯಾಗಿ ಕೆಮಿಕಲ್ ಕ್ಯಾಸ್ಟ್ರೇಶನ್ ಪರಿಚಯಿಸಲಾಗಿದೆ ಎಂದು ವರದಿ ಹೇಳಿದೆ.

ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ, ರಾಸಾಯನಿಕ ಬಳಸಿ ಪುರುಷತ್ವ ಹರಣ ಪ್ರಕ್ರಿಯೆಗೆ ಒಳಪಡಿಸುವ ಮುನ್ನ ಅಪರಾಧಿಯ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಸಚಿವ ನಸೀಮ್ ಹೇಳಿದ್ದಾರೆ.

ಒಪ್ಪಿಗೆ ಪಡೆಯದೆ ರಾಸಾಯನಿಕ ಬಳಸಿ ಪುರುಷತ್ವ ಹರಣಕ್ಕೆ ಆದೇಶಿಸಿದಲ್ಲಿ ಅಪರಾಧಿಯು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದೂ ಅವರು ಹೇಳಿದ್ದಾರೆ.

ಒಪ್ಪದಿದ್ದರೆ ಏನಾಗುತ್ತದೆ?

ಅಪರಾಧಿಯು ರಾಸಾಯನಿಕ ಬಳಸಿ ಪುರುಷತ್ವ ಹರಣಕ್ಕೆ ಒಪ್ಪಿಗೆ ಸೂಚಿಸದಿದ್ದಲ್ಲಿ ಪಾಕಿಸ್ತಾನ ದಂಡ ಸಂಹಿತೆಯ (ಪಿಪಿಸಿ) ಅಡಿಯಲ್ಲಿ ಆತನಿಗೆ ಮರಣದಂಡನೆ ವಿಧಿಸಬಹುದಾಗಿದೆ. ಅಥವಾ 25 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: 

ಆದಾಗ್ಯೂ, ಶಿಕ್ಷೆ ಏನೆಂಬುದು ನಿರ್ಧರಿಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ನ್ಯಾಯಾಧೀಶರು ರಾಸಾಯನಿಕ ಬಳಸಿ ಪುರುಷತ್ವ ಹರಣಕ್ಕೆ ಆದೇಶಿಸಬಹುದು ಅಥವಾ ಪಿಪಿಸಿ ಅಡಿಯಲ್ಲಿ ಶಿಕ್ಷೆ ನೀಡಿ ಆದೇಶಿಸಬಹುದು ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು