ಲಾಹೋರ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕಳೆದ ವಾರ ದಾಖಲಾಗಿದ್ದ ಎರಡು ಭಯೋತ್ಪಾದನಾ ಪ್ರಕರಣ ಸೇರಿ ಮೂರು ಪ್ರಕರಣಗಳಲ್ಲಿ ಇಲ್ಲಿಯ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಶೆಹಬಾಜ್ ರಿಜ್ವಿ ಮತ್ತು ಫಾರೂಕ್ ಹೈದರ್ ಅವರಿದ್ದ ಪೀಠ ಮಾರ್ಚ್ 27ರವರೆಗೆ ಜಾಮೀನು ಮಂಜೂರು ಮಾಡಿದೆ.
ತೋಷಖಾನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ನ್ಯಾಯಮೂರ್ತಿ ಬಕೀರ್ ನಖ್ವಿ ಅವರ ಎದುರು ಹಾಜರಾದ ಇಮ್ರಾನ್ ಅವರಿಗೆ ಮುಂದಿನ ಮಂಗಳವಾರದವರೆಗೆ ಜಾಮೀನು ದೊರಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.