ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಿಂದ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಳ ಸಾಧ್ಯತೆ: ಅಮೆರಿಕ

Last Updated 18 ಮೇ 2022, 11:41 IST
ಅಕ್ಷರ ಗಾತ್ರ

ವಾಷಿಂಗ್ಟನ್(ಪಿಟಿಐ): ತನ್ನ ಉಳಿವಿಗಾಗಿ ಅಣ್ವಸ್ತ್ರಗಳ ಅಗತ್ಯವಿದೆ ಎಂದು ಭಾವಿಸಿರುವ ಪಾಕಿಸ್ತಾನವು, 2022ರಲ್ಲಿ ಅಣ್ವಸ್ತ್ರಗಳನ್ನು ಆಧುನೀಕರಣಗೊಳಿಸುವ ಮತ್ತು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಪೆಂಟಗನ್‌ನ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019ರ ಫೆಬ್ರುವರಿಯಲ್ಲಿ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಘರ್ಷದ ಸ್ಥಿತಿ ಮುಂದುವರಿದಿದೆ.ಭಾರತದ ಜೊತೆಗಿನ ಸಂಘರ್ಷದ ಸ್ಥಿತಿಯಿಂದಾಗಿ ಪಾಕಿಸ್ತಾನವು ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ಮುಂದುವರಿಸಲಿದೆ ಎಂದುಇತ್ತೀಚೆಗೆ ಸೇನಾ ಸೇವೆಗಳ ಸಮಿತಿಯ ಸದಸ್ಯರಿಗೆ ಭದ್ರತಾ ಗುಪ್ತಚರದ ನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ಸ್ಕಾಟ್ ಬೆರಿಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT