ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ನಡೆಯುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕ್‌ ಭಾಗಿ?

ಶಾಂಘೈ ಸಹಕಾರ ಸಂಘಟನೆ ಅಡಿಯಲ್ಲಿ ನಡೆಯುವ ಸಮಾವೇಶ
Last Updated 13 ಆಗಸ್ಟ್ 2022, 11:18 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌:ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಅಡಿಯಲ್ಲಿಅಕ್ಟೋಬರ್‌ನಲ್ಲಿ ಭಾರತ ಆಯೋಜಿಸಲಿರುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿಪಾಕಿಸ್ತಾನವು ಭಾಗಿಯಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕವಾಯತಿನಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನಾ ತುಕಡಿಗಳು ಒಟ್ಟಿಗೆ ಭಾಗವಹಿಸಲಿವೆ. ಭಾರತದಲ್ಲಿ ನಡೆಯುತ್ತಿರುವ ಇಂಥ ಕವಾಯತಿನಲ್ಲಿಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾಗವಹಿಸುತ್ತಿದೆ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ದಿನಪತ್ರಿಕೆಯು ವರದಿ ಮಾಡಿದೆ.

ಭಾರತ ಅಧ್ಯಕ್ಷತೆ ವಹಿಸಿರುವ ಎಸ್‌ಸಿಒದ ಪ್ರಾದೇಶಿಕ ಭಯೋತ್ಪಾದನೆ ನಿಗ್ರಹ ವ್ಯವಸ್ಥೆ (ಆರ್‌ಟಿಎಸ್‌) ಅನ್ವಯ ಇದು ನಡೆಯಲಿದೆ ಎಂದುಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಆಸಿಂ ಇಫ್ತಿಕಾರ್‌ ಅವರನ್ನು ಉಲ್ಲೇಖಿಸಿ ಪತ್ರಿಕೆ ಈ ವರದಿ ಮಾಡಿದೆ.

ಎಸ್‌ಸಿಒ ಸದಸ್ಯ ರಾಷ್ಟ್ರವಾಗಿ ಪಾಕಿಸ್ತಾನವು ಭಾಗವಹಿಸಲಿದೆ. ಹರಿಯಾಣದ ಮಾನೇಸರ್‌ನಲ್ಲಿ ನಡೆಯುವ ಈ ಕವಾಯಿತಿನಲ್ಲಿ ರಷ್ಯಾ, ಚೀನಾ, ಪಾಕಿಸ್ತಾನ, ಇರಾನ್, ಕಜಕಿಸ್ತಾನ, ತಜಿಕಿಸ್ತಾನ, ಉಜ್ಬೇಕಿಸ್ತಾನ ಕೂಡಾ ಭಾಗವಹಿಸಲಿವೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT