ಶನಿವಾರ, ಜೂನ್ 25, 2022
24 °C

ಭಾರತ ಮಾದರಿಯ ಕೊರೊನಾ ವೈರಸ್‌ ವಿರುದ್ಧ ಫೈಜರ್‌ ಪರಿಣಾಮಕಾರಿಯಲ್ಲ: ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌:  ಬಯೋಎನ್‌ಟೆಕ್‌ ಅಭಿವೃದ್ಧಿಪಡಿಸಿರುವ ಫೈಜರ್‌ ಲಸಿಕೆಯು ಭಾರತ ಮಾದರಿಯ (ಡೆಲ್ಟಾ) ಕೊರೊನಾ ವೈರಸ್‌ ವಿರುದ್ಧ ಹೆಚ್ಚು ಪರಿಣಾಮಕಾರಿಯಲ್ಲ ಎಂಬ ಅಂಶ ಬಹಿರಂಗವಾಗಿದೆ. 

ಫೈಜರ್‌ ಲಸಿಕೆಯ ಪೂರ್ಣ ಡೋಸ್‌ ಪಡೆದುಕೊಂಡವರು ಡೆಲ್ಟಾ ವೈರಸ್‌ ವಿರುದ್ಧ ಐದು ಪಟ್ಟು ಕಡಿಮೆ ಪ್ರತಿಕಾಯಗಳನ್ನು ಹೊಂದಬಹುದಾದ ಸಾಧ್ಯತೆಗಳಿವೆ ಎಂದು  ಅಧ್ಯಯನ ತಿಳಿಸಿದೆ. ಈ ಅಧ್ಯಯನ ವರದಿಯು ‘ದಿ ಲ್ಯಾನ್ಸೆಟ್‌ ಜರ್ನಲ್‌‘ನಲ್ಲಿ ಪ್ರಕಟವಾಗಿದೆ. 

ಈ ಮೊದಲು ಪತ್ತೆಯಾದ ಕೊರೊನಾ ವೈರಸ್‌ನ ರೂಪಾಂತರ ತಳಿಯಾಗಿರುವ ಡೆಲ್ಟಾ ವೈರಸ್‌ ಭಾರತದಲ್ಲಿ ಮೊದಲಬಾರಿಗೆ ಪತ್ತೆಯಾಗಿದೆ. 

ವೈರಸ್ ಅನ್ನು ಪತ್ತೆಹಚ್ಚಲು ಮತ್ತು ಹೋರಾಡಲು ಸಮರ್ಥವಾಗಿರುವ ಈ ಪ್ರತಿಕಾಯಗಳ ಮಟ್ಟವು ಏರು ವಯಸ್ಸಿನವರಲ್ಲಿ ಕಡಿಮೆಯಾಗಿದೆ ಎಂದು ಅಧ್ಯಯನವು ಹೇಳಿದೆ. ಅಲ್ಲದೆ,   ಪ್ರತಿಕಾಯಗಳ ಮಟ್ಟವು ಕಾಲಾನಂತರದಲ್ಲಿ ಕುಸಿಯುತ್ತವೆ. ಹೀಗಾಗಿ ದುರ್ಬಲರಿಗೆ ಹೆಚ್ಚಿನ ಪ್ರಮಾಣದ ಲಸಿಕೆ ನೀಡಬೇಕಾದ ಅಗತ್ಯವನ್ನು ಅಧ್ಯಯನ ಸಾಬೀತು ಮಾಡಿದೆ. 

ಬ್ರಿಟನ್‌ನ ‘ಫ್ರಾನ್ಸಿಸ್ ಕ್ರಿಕ್ ಸಂಸ್ಥೆ‘ಯ ಸಂಶೋಧಕರ ತಂಡ ಈ ಅಧ್ಯಯನ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು