ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಪ್ರಧಾನಿ ದೇವೂಬಾ ಅವರ ಎನ್‌ಸಿಪಿ

Last Updated 27 ನವೆಂಬರ್ 2022, 15:41 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ನೇತೃತ್ವದ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ‍ಪಕ್ಷವು (ಎನ್‌ಸಿಪಿ) 53 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ನೇತೃತ್ವದ ಸಿಪಿಎನ್‌– ಯುಎಂಎಲ್‌ 42 ಸ್ಥಾನಗಳಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದ್ದರೆ, 17 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಿಪಿಎನ್‌– ಮಾವೋವಾದಿ ಪಕ್ಷವು 3ನೇ ಸ್ಥಾನದಲ್ಲಿದೆ. ಸಿಪಿಎನ್‌–ಯುನಿಫೈಯ್ಡ್‌ ಸೋಷಿಯಲಿಸ್ಟ್ ಪಕ್ಷವು 10 ಸ್ಥಾನದಲ್ಲಿ ಗೆಲುವು ಸಾಧಿಸಿದೆ.

ಹೊಸದಾಗಿ ರಚನೆಯಾದ ರಾಷ್ಟ್ರೀಯ ಸ್ವತಂತ್ರ್ಯ ಪಕ್ಷ (ಆರ್‌ಎಸ್‌ಪಿ) ಮತ್ತು ಪ್ರೊ–ಹಿಂದು ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ತಲಾ 7 ಸ್ಥಾನಗಳನ್ನು ಗೆದ್ದುಕೊಂಡಿವೆ. ಸ್ವತಂತ್ರ್ಯ ಹಾಗೂ ಇತರ ಅಭ್ಯರ್ಥಿಗಳು 21 ಸ್ಥಾನದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಪ್ರಧಾನಿ ದೇವುಬಾ ಅವರೊಂದಿಗೆ ಮೂವರು ಮಾಜಿ ಪ್ರಧಾನಿಗಳಾದ ಪ್ರಚಂಡ, ಓಲಿ ಹಾಗೂ ಮಾದವ್‌ ಅವರು ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ದೇವುಬಾ ಮತ್ತು ಪ್ರಚಂಡ ಅವರು ಶನಿವಾರ ಬಲುವತಾರ್‌ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿ ದೇಶದಲ್ಲಿ ಹೊಸ ಬಹುಮತದ ಸರ್ಕಾರ ರಚಿಸಲು ತಮ್ಮ ಆಡಳಿತ ಐದು ಪಕ್ಷಗಳ ಮೈತ್ರಿಯನ್ನು ಮುಂದುವರಿಸಲು ಒಪ್ಪಿಕೊಂಡಿದ್ದಾರೆ.

ನೇರ ಮತದಾನದ 165 ಸ್ಥಾನಗಳಲ್ಲಿ 21 ಕ್ಷೇತ್ರಗಳ ಫಲಿತಾಂಶ ಇನ್ನೂ ಬರಬೇಕಿದೆ.ಸಂಸತ್‌ ಮತ್ತು ಏಳು ಪ್ರಾಂತೀಯ ವಿಧಾನಸಭೆಗಳಿಗೆ ನ.20ರಂದು ಚುನಾವಣೆ ನಡೆದಿತ್ತು. 275 ಸ್ಥಾನಗಳಲ್ಲಿ 165 ಸ್ಥಾನಗಳಿಗೆ ನೇರ ಮತದಾನದ ಮೂಲಕ ಆಯ್ಕೆ ನಡೆಯಲಿದೆ. ಸರಳ ಬಹುಮತ ಪಡೆಯಲು 138 ಸ್ಥಾನ ಗೆಲ್ಲಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT