ಶನಿವಾರ, ಆಗಸ್ಟ್ 13, 2022
22 °C

ಪ್ರಧಾನಿ ಮೋದಿ ನನ್ನ ಸ್ನೇಹಿತ, ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ: ಟ್ರಂಪ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ‘ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನನ್ನ ಸ್ನೇಹಿತರಾಗಿದ್ದು, ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ನೀವು ಓರ್ವ ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವ್ಯಕ್ತಿಯನ್ನು ಪಡೆದಿದ್ದೀರಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಈ ವರ್ಷ ಫೆಬ್ರುವರಿಯಲ್ಲಿ ಪತ್ನಿ ಮೆಲಾನಿಯಾ ಟ್ರಂಪ್‌ ಜೊತೆಗೆ ಭಾರತಕ್ಕೆ ಭೇಟಿ ನೀಡಿದ್ದ ಬಗ್ಗೆ ಮಾತನಾಡಿದ ಟ್ರಂಪ್‌, ‘ನಾವು ಅಶ್ಚರ್ಯಕರವಾದ ರೀತಿಯಲ್ಲಿ ಸಮಯವನ್ನು ಕಳೆದೆವು ಮತ್ತು ಅದ್ಭುತವಾದ ಜನರನ್ನು ಅಲ್ಲಿ ನೋಡಿದ್ದೇವೆ. ಅದೊಂದು ಸೋಜಿಗದ ಸ್ಥಳ, ದೇಶವಾಗಿದ್ದು, ಖಂಡಿತವಾಗಿಯೂ ಶ್ರೇಷ್ಠವಾಗಿದೆ’ ಎಂದಿದ್ದಾರೆ.

ಮಾಧ್ಯಮದವರನ್ನುದ್ದೇಶಿಸಿ ಮಾತನಾಡುವ ವೇಳೆ ಹೋಸ್ಟನ್‌ನಲ್ಲಿ ನಡೆದ ‘ಹೌಡಿ–ಮೋದಿ’ ಸಮಾರಂಭದ ಬಗ್ಗೆಯೂ ಹೇಳಿಕೆ ನೀಡಿದ ಅವರು, ‘ನಾವು ಹ್ಯೂಸ್ಟನ್‌ ನಗರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆವು. ಅದು ಅದ್ಬುತವಾಗಿತ್ತು. ನಾವು ಭಾರತದಿಂದ ಮತ್ತು ಪ್ರಧಾನಿ ಮೋದಿ ಅವರಿಂದ ದೊಡ್ಡ ಮಟ್ಟದ ಬೆಂಬಲವನ್ನು ಪಡೆದುಕೊಂಡಿದ್ದೇವೆ. ಭಾರತದವರು ಟ್ರಂಪ್‌ಗಾಗಿ ಮತ ಚಲಾಯಿಸಲಿದ್ದಾರೆ ಎನಿಸುತ್ತದೆ’ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು