ಕಠ್ಮಂಡು: ಹಿರಿಯ ಮಾಧೇಸಿ ಸಮುದಾಯದ ನಾಯಕ, ಜನತಾ ಸಮಾಜವಾದಿ ಪಕ್ಷದ (ಜೆಎಸ್‌ಪಿ) ರಾಮ್‌ಸಹಾಯ್ ಪ್ರಸಾದ್ ಯಾದವ್ ಅವರು ನೇಪಾಳದ ಮೂರನೇ ಉಪಾಧ್ಯಕ್ಷರಾಗಿ ಸೋಮವಾರ ಇಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನ ‘ಶೀತಲ್ ನಿವಾಸ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಪಾಳದ ಅಧ್ಯಕ್ಷ ರಾಮ ಚಂದ್ರ ಪೌಡೆಲ್ ಅವರು ಯಾದವ್ ಅವರಿಗೆ ಪ್ರಮಾಣವಚನ ಭೋಧಿಸಿದರು.
ನೇಪಾಳಿ ಉಡುಗೆ ತೊಟ್ಟಿದ್ದ ಯಾದವ್ ಅವರು ನೇಪಾಳಿ ಭಾಷೆಯಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದರು. ಪ್ರಧಾನಿ ಪುಷ್ಪ ಕಮಲ್ ದಹಲ್ , ಸ್ಪೀಕರ್ ದೇವ್ ರಾಜ್ ಘಿಮಿರೆ, ಮಾಜಿ ಪ್ರಧಾನಮಂತ್ರಿಗಳು, ಸಚಿವರು ಮತ್ತು ಸಂಸದರು ಉಪಸ್ಥಿತರಿದ್ದರು.
ರಾಮ್‌ಸಹಾಯ್ ಅವರಲ್ಲದೆ ಸಿಪಿಎನ್– ಯುಎಂಎಲ್ ಅಭ್ಯರ್ಥಿ ಅಷ್ಟಲಕ್ಷ್ಮೀ ಶಕ್ಯ, ಜನಮತ ಪಕ್ಷದ ಪರಿಮಳ ಯಾದವ್ ಮತ್ತು ಮಮತಾ ಝಾ ಅವರು ಕಣದಲ್ಲಿದ್ದರು. 30,328 ಮತಗಳನ್ನು ಪಡೆದಿದ್ದ ರಾಮ್‌ಸಹಾಯ್ ಅವರು 16,328 ಮತಗಳನ್ನು ಪಡೆದ ಶಕ್ಯ ಅವರೆದುರು ವಿಜಯ ಸಾಧಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.