ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೆ ದಾಖಲಾಗಬೇಕಾದ ಅಪಾಯ ಡೆಲ್ಟಾ ತಳಿ ಸೋಂಕಿತರಲ್ಲಿ ಹೆಚ್ಚು

Last Updated 28 ಆಗಸ್ಟ್ 2021, 10:58 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ನ ಅಲ್ಫಾ ತಳಿಗಿಂತ ಡೆಲ್ಟಾ ರೂಪಾಂತರ ತಳಿ ಸೋಂಕಿಗೆ ಒಳಗಾದವರಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾದ ಅಪಾಯ ಎರಡು ಪಟ್ಟು ಹೆಚ್ಚಿಗೆ ಇರುವುದು ಕಂಡುಬಂದಿದೆ.

ಪಬ್ಲಿಕ್‌ ಹೆಲ್ತ್ ಇಂಗ್ಲೆಂಡ್‌ (ಪಿಎಚ್‌ಇ) ಹಾಗೂ ಕೇಂಬ್ರಿಜ್‌ ಯನಿವರ್ಸಿಟಿ ಜಂಟಿಯಾಗಿ ಈ ಸಂಬಂಧ ಕೈಗೊಂಡ ವ್ಯಾಪಕ ಅಧ್ಯಯನದ ವರದಿ ವೈಜ್ಞಾನಿಕ ನಿಯತಕಾಲಿಕೆ ‘ಲಾನ್ಸೆಟ್‌’ನಲ್ಲಿ ಪ್ರಕಟವಾಗಿದೆ.

ಅಲ್ಫಾ ಮತ್ತು ಡೆಲ್ಟಾ ತಳಿಯ ಸೋಂಕಿಗೆ ಒಳಗಾದವರಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳ ಕುರಿತು ನಡೆದ ಮೊದಲ ವಿಸ್ತೃತ ಅಧ್ಯಯನ ಇದಾಗಿದೆ. ಕೋವಿಡ್‌ ವಿರುದ್ಧ ಪರಿಣಾಮಕಾರಿ ರಕ್ಷಣೆಗಾಗಿ ನಿಗದಿ ಪಡಿಸಿದ ಡೋಸ್‌ಗಳಷ್ಟು ಲಸಿಕೆ ಪಡೆಯಬೇಕು ಎಂಬುದಕ್ಕೆ ಅಧ್ಯಯನ ವರದಿಯಲ್ಲಿ ಒತ್ತು ನೀಡಲಾಗಿದೆ.

ಬ್ರಿಟನ್‌ನಲ್ಲಿ ಮೊದಲು ಕಂಡುಬಂದ ಅಲ್ಫಾ ತಳಿಗಿಂತ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾ ತಳಿಯ ಸೋಂಕು ಹೆಚ್ಚು ತೀವ್ರತೆ ಹೊಂದಿದೆ ಎಂಬ ಈ ಮೊದಲಿನ ವರದಿಗಳನ್ನು ಸಹ ಈ ಹೊಸ ಅಧ್ಯಯನ ದೃಢಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT