ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ರಮಿತ ಉಕ್ರೇನ್‌ ನಗರಗಳಲ್ಲೂ ರಷ್ಯಾ ವಿಜಯೋತ್ಸವ

ಪ್ರಮುಖ ನಗರಗಳ ಮೇಲೆ ಮುಂದುವರಿದ ಕ್ಷಿಪಣಿ, ಶೆಲ್‌ ದಾಳಿ
Last Updated 9 ಮೇ 2022, 16:11 IST
ಅಕ್ಷರ ಗಾತ್ರ

ಕೀವ್‌/ ಮಾಸ್ಕೊ: ರಷ್ಯಾ ಪಡೆಗಳು ಉಕ್ರೇನ್‌ನಲ್ಲಿ ಆಕ್ರಮಿಸಿರುವಪ್ರದೇಶಗಳಲ್ಲಿ ಸೋಮವಾರ 2ನೇ ವಿಶ್ವ ಸಮರದ ಗೆಲುವಿನ ನೆನಪಿನಾರ್ಥ ಸೋವಿಯತ್‌ ಯುಗದ ಶೈಲಿಯಲ್ಲೇ ವಿಜಯೋತ್ಸವವನ್ನು ಆಚರಿಸಿದವು.

ಆಕ್ರಮಿತ ಕೆರ್ಸಾನ್‌ನ ಡೌನ್‌ಟೌನ್‌ನಲ್ಲಿ ರಷ್ಯಾ ಪಡೆಗಳು ನಾಗರಿಕರನ್ನು ಒಟ್ಟುಗೂಡಿಸಿ, ಸೋವಿಯತ್ ಕೆಂಪು ಧ್ವಜಗಳನ್ನು ಪ್ರದರ್ಶಿಸಿ, ಪರೇಡ್‌ ನಡೆಸಿದರು. ಬಾಂಬ್‌ ದಾಳಿಯಿಂದ ಧ್ವಂಸಗೊಂಡಿರುವ ಇನೆರ್‌ಹೊದರ್‌ ಮತ್ತು ಮರಿಯುಪೊಲ್‌ನಲ್ಲಿ ವಿಜಯೋತ್ಸವದ ಕಾರ್ಯಕ್ರಮ ಚಿಕ್ಕದಾಗಿ ನಡೆಸಲಾಯಿತು.

ಉಕ್ರೇನ್‌ ಮೇಲಿನ ಸೇನಾ ಕಾರ್ಯಾಚರಣೆ 75ನೇ ದಿನಕ್ಕೆ ಕಾಲಿಟ್ಟಿದ್ದು, ಆಯಕಟ್ಟಿನ ಸ್ಥಳಗಳ ಮೇಲೆ ಕ್ಷಿಪಣಿ, ಶೆಲ್‌ ಹಾಗೂ ವಾಯು ದಾಳಿಯನ್ನು ರಷ್ಯಾ ಮುಂದುವರಿಸಿದೆ.0

ಹಡಗು ಹೊಡೆದುರುಳಿಸುವ ನಾಲ್ಕು ಓನಿಕ್ಸ್‌ ಕ್ಷಿಪಣಿಗಳನ್ನು ರಷ್ಯಾ, ಕ್ರಿಮಿಯಾದಿಂದ ಒಡೆಸಾ ಮೇಲೆ ಉಡಾಯಿಸಿದೆ ಎಂದು ಉಕ್ರೇನ್‌ ಸೇನೆ ಹೇಳಿದೆ.

ಸ್ಲೋವಿಯನ್‌ಸ್ಕ್‌,ಡೊನೆಟ್‌ಸ್ಕ್‌ ಪ್ರಾಂತ್ಯದ ನಗರ ಕೇಂದ್ರ ಭಾಗಗಳನ್ನು ಗುರಿಯಾಗಿಸಿ, ರಷ್ಯಾ ಪಡೆಗಳು ಶೆಲ್‌ ದಾಳಿ ನಡೆಸಿವೆ.ಸಾವು–ನೋವು ಇನ್ನೂ ವರದಿಯಾಗಿಲ್ಲ ಎಂದುಸ್ಲೋವಿಯನ್‌ಸ್ಕ್‌ ನಗರದ ಮೇಯರ್‌ ವಾಡಿಮ್‌ ಲಿಯಾಖ್‌ ತಿಳಿಸಿದ್ದಾರೆ.

ರಷ್ಯಾ ಕಪ್ಪು ಸಮುದ್ರದಲ್ಲಿ ಕ್ಷಿಪಣಿ ವಾಹಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ ಕಲಿಬ್ ಕ್ಷಿಪಣಿಗಳ ಏಳು ವಾಹಕಗಳನ್ನು ನಿಯೋಜಿಸಿದ್ದು, ಅವು 50 ಕ್ಷಿಪಣಿಗಳನ್ನು ಉಡಾಯಿಸಬಲ್ಲವು. ಮೇ 4ರವರೆಗೆ ಅಲ್ಲಿ ಮೂರು ಕಲಿಬ್‌ ಕ್ಷಿಪಣಿ ವಾಹಕಗಳನ್ನು ಮಾತ್ರ ರಷ್ಯಾ ಹೊಂದಿತ್ತು ಎಂದು ಉಕ್ರೇನ್‌ ಸೇನೆ ಹೇಳಿರುವುದಾಗಿ ‘ದಿ ಕೀವ್‌ ಇಂಡಿಪೆಂಡೆಂಟ್‌’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೀವ್‌ ಪ್ರಾಂತ್ಯದ ಮಕರೀವ್‌ ಬಳಿ ರಷ್ಯಾ ಪಡೆಗಳು ವಾಪಸಾಗುವಾಗ ಮೂವರು ನಾಗರಿಕರ ಹಣೆಗೆ ಗುಂಡಿಟ್ಟು ಕೊಂದುಹೆದ್ದಾರಿ ಬದಿ ಸಮಾಧಿ ಮಾಡಿರುವುದು ಸೋಮವಾರ ಬೆಳಕಿಗೆ ಬಂದಿದೆ ಎಂದು ಪ್ರಾದೇಶಿಕ ಗವರ್ನರ್‌ ಕಚೇರಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT