ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪಣಿ ದಾಳಿ ನಿಷ್ಕ್ರಿಯಗೊಳಿಸಿದ ಸೌದಿ ಅರೇಬಿಯಾ

Last Updated 28 ಫೆಬ್ರುವರಿ 2021, 5:49 IST
ಅಕ್ಷರ ಗಾತ್ರ

ದುಬೈ: ‘ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ ಮೇಲೆ ಯೆಮೆನ್‌ನ ಹೂಥಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿ ಮತ್ತು ದಕ್ಷಿಣ ಪ್ರಾಂತ್ಯದ ಜಿಝಾನ್‌ ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್‌ ದಾಳಿಯನ್ನು ಕೂಡ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಸೌದಿ ಅರೇಬಿಯಾ ತಿಳಿಸಿದೆ.

ಈ ದಾಳಿಗಳಲ್ಲಿ ಯಾವುದೇ ಪ್ರಾಣ ಮತ್ತು ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ, ಈವರೆಗೂ ಹೂಥಿ ಬಂಡುಕೋರರು ಈ ದಾಳಿಯ ಹೊಣೆಯನ್ನು ಹೊತ್ತಿಲ್ಲ. ಅಲ್ಲದೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ.

ಗಾಳಿಯಲ್ಲಿ ಕ್ಷಿಪಣಿ ಸ್ಫೋಟಗೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾ ಮತ್ತು ನೆರೆ ರಾಷ್ಟ್ರ ಯಮೆನ್‌ನ ಹೂಥಿ ಬಂಡುಕೋರರ ನಡುವೆ ಆಗಾಗ ಸಂಘರ್ಷಗಳು ಏರ್ಪಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT