ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ 7 ಭಾರತೀಯರನ್ನು ಹೊರ ಹಾಕುವ ಪ್ರಕ್ರಿಯೆ ಆರಂಭ

Last Updated 28 ಜನವರಿ 2022, 4:58 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ ಮತ್ತು ಕಳೆದ ವಾರ ಅಮೆರಿಕ ಮತ್ತು ಕೆನಡಾ ಗಡಿಯ ಬಳಿ ಬಂಧನಕ್ಕೀಡಾಗಿದ್ದ ಏಳು ಭಾರತೀಯ ಪ್ರಜೆಗಳನ್ನು ಗಡಿ ಗಸ್ತು ಪಡೆಯ ಬಂಧನದಿಂದ ಬಿಡುಗಡೆ ಮಾಡಲಾಗಿದ್ದು, ದೇಶದಿಂದ ಹೊರ ಹಾಕುವ ಪ್ರಕ್ರಿಯೆ ಆರಂಭಿಸಲಾಗಿದೆ.

‘ಕಳೆದ ವಾರ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಎಲ್ಲಾ ಏಳು ವಲಸಿಗರನ್ನು ದೇಶದಿಂದ ಹೊರ ಹಾಕುವ ಅಥವಾ ವಲಸೆ ಮತ್ತು ರಾಷ್ಟ್ರೀಯತೆಯ ಕಾಯಿದೆಯ ಪ್ರಕಾರ ತೆಗೆದುಹಾಕುವ ಪ್ರಕ್ರಿಯೆಗಳಿಗೆ ಆಡಳಿತಾತ್ಮಕ ಚಾಲನೆ ನೀಡಲಾಗಿದೆ’ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏಳು ಭಾರತೀಯ ಪ್ರಜೆಗಳಲ್ಲಿ ಆರು ಮಂದಿಯನ್ನು ಆರ್ಡರ್ ಆಫ್ ಸೂಪರ್‌ವಿಜನ್ ಅಡಿಯಲ್ಲಿ ಇರಿಸಲಾಗಿದೆ ಮತ್ತು ಒಬ್ಬರನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

‘ಎಲ್ಲಾ ವಲಸಿಗರನ್ನು ಗಡಿ ಗಸ್ತು ಪಡೆ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ನಂತರ ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯನ್ನು ಸಂಪರ್ಕಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಏಳು ಭಾರತೀಯ ಪ್ರಜೆಗಳನ್ನು ಕಳೆದ ವಾರ ಅಮೆರಿಕ ಅಧಿಕಾರಿಗಳು ಅಮೆರಿಕ / ಕೆನಡಾ ಗಡಿಯ ಬಳಿ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 47 ವರ್ಷದ ಸ್ಟೀವ್ ಶಾಂಡ್ ಮೇಲೆ ಮಾನವ ಕಳ್ಳಸಾಗಣೆ ಆರೋಪ ಹೊರಿಸಲಾಗಿದೆ.

ಜನವರಿ 19 ರಂದು ಉತ್ತರ ಡಕೋಟಾದ ಲಂಕಾಸ್ಟರ್‌ನಲ್ಲಿ ಶಾಂಡ್ ಅನ್ನು ಬಂಧಿಸಲಾಗಿತ್ತು.

15 ಪ್ರಯಾಣಿಕರಿದ್ದ ವ್ಯಾನ್ ಅನ್ನು ಓಡಿಸುತ್ತಿದ್ದ ಆತ ಅಕ್ರಮವಾಗಿ ಅಮೆರಿಕದಲ್ಲಿರುವ ಇಬ್ಬರು ಭಾರತೀಯರನ್ನು ಕರೆದೊಯ್ಯುತ್ತಿದ್ದ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT