ಗುರುವಾರ , ಮಾರ್ಚ್ 23, 2023
28 °C

36 ನಿಮಿಷಗಳ ಪ್ರಯಾಣಕ್ಕೆ 14 ಆಸನಗಳ ಖಾಸಗಿ ವಿಮಾನ: ರಿಷಿ ಸುನಕ್ ವಿರುದ್ಧ ಟೀಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಂಡನ್: ಲಂಡನ್‌ನಿಂದ ಲೀಡ್ಸ್‌ಗೆ ಪ್ರಯಾಣಿಸಲು ಖಾಸಗಿ ವಿಮಾನ ಬಳಸಿದ್ದ ಭಾರತ ಮೂಲದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಭಾರಿ ಟೀಕೆಗೆ ಒಳಗಾಗಿದ್ದಾರೆ.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ವಿಪಕ್ಷ ಆರೋಪಿಸಿದೆ.

ಬ್ರಿಟನ್‌ನಲ್ಲಿ ಚಳಿ ತೀವ್ರಗೊಂಡಿದ್ದು, ಹಲವರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಲೀಡ್ಸ್‌ನ ರುಟ್‌ಲ್ಯಾಂಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಭೇಟಿಯಾಗಲು ರಿಷಿ ಸುನಕ್ 14 ಆಸನಗಳಿರುವ ಆರ್‌ಎಎಫ್ ವಿಮಾನದ ಮೂಲಕ ತೆರಳಿದ್ಧಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ರಿಷಿ ಸುನಕ್ ವಿಮಾನ ಹತ್ತುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ರಿಷಿ ದುಂದುಗಾರಿಕೆ ಮಾಡುತ್ತಿದ್ದಾರೆ ಎಂದು ಲೇಬರ್ ಪಾರ್ಟಿ ಟೀಕಿಸಿದೆ.

‘ಚಳಿಯ ಹೊಡೆತಕ್ಕೆ ಸಿಲುಕಿ ದೇಶದ ಆರೋಗ್ಯ ವ್ಯವಸ್ಥೆ ತತ್ತರಿಸುತ್ತಿದೆ. ಸಂತ್ರಸ್ತರು ಮತ್ತು ಸಿಬ್ಬಂದಿ ಸರ್ಕಾರದಿಂದ ನೆರವಿಗಾಗಿ ಗೋಗರೆಯುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಫೋಟೊಗಾಗಿ ಪ್ರಧಾನಿಗಳು ಲಂಡನ್‌ನಿಂದ ಲೀಡ್ಸ್‌ಗೆ ಖಾಸಗಿ ವಿಮಾನದಲ್ಲಿ ತೆರಳಿದ್ದಾರೆ’ ಎಂದು ಲೇಬರ್ ಪಕ್ಷದ ನಾಯಕಿ ಅಂಗೆಲಾ ರಾಯ್ನರ್ ಟೀಕಿಸಿದ್ದಾರೆ.

‘ದೇಶದ ಜನರು ನಿತ್ಯಜೀವನದ ಖರ್ಚು ಭರಿಸಲು ಒದ್ದಾಡುತ್ತಿರುವ ಈ ಕ್ಲಿಷ್ಟ ಸಂದರ್ಭದಲ್ಲಿ ಅವರ ತೆರಿಗೆ ಹಣದಲ್ಲಿ 36 ನಿಮಿಷಗಳ ವೈಮಾನಿಕ ಪ್ರಯಾಣ ಮತ್ತು 3 ಗಂಟೆಯ ಭೇಟಿಗೆ ಎಷ್ಟು ದುಂದು ವೆಚ್ಚ ಮಾಡಲಾಗಿದೆ ಎಂಬುದನ್ನು ಪ್ರಧಾನಿಗಳು ಸ್ಪಷ್ಟಪಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು