ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗ‍ಪುರ: ಮಕ್ಕಳಲ್ಲಿ ಹೆಚ್ಚಿದ ಎಂಐಎಸ್‌–ಸಿ ಸೋಂಕು

Last Updated 7 ನವೆಂಬರ್ 2021, 14:58 IST
ಅಕ್ಷರ ಗಾತ್ರ

ಸಿಂಗಪುರ: ಸಿಂಗಪುರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಮಕ್ಕಳಲ್ಲಿ ಸೋಂಕು ಸಂಬಂಧಿಸಿದ ಅಪರೂಪದ ಬಹುಅಂಗಗಳ ಉರಿಯೂತದಲಕ್ಷಣ (ಎಂಎಸ್‌ಐ–ಸಿ) ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

ಸಿಂಗಪುರದಲ್ಲಿ ಶನಿವಾರ 3,035 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 12 ಮಂದಿ ಕೋವಿಡ್‌ ಸಂಬಂಧಿತ ಕಾಯಿಲೆಗಳಿಂದಾಗಿ ಮೃತಪಟ್ಟಿದ್ದಾರೆ.

‘ಈವರೆಗೆ 8,000 ಮಕ್ಕಳಲ್ಲಿ ಕೋವಿಡ್‌ ದೃಢಪಟ್ಟಿದ್ದು, ಈ ಪೈಕಿ ನಾಲ್ವರಲ್ಲಿ ಅಪರೂಪದ ಎಂಎಸ್‌ಐ–ಸಿ ಸೋಂಕಿನ ಸ್ವರೂಪ ಕಾಣಿಸಿಕೊಂಡಿದೆ. ಈ ಸ್ವರೂಪವು ಸಾಂಕ್ರಾಮಿಕದ ಆರಂಭದಿಂದಲೇ ಕಾಣಿಸಿಕೊಳ್ಳುತ್ತಿದೆ. ಸೋಂಕಿತ ಈ ನಾಲ್ವರು ಮಕ್ಕಳು ಎರಡು ತಿಂಗಳಿಂದ 8 ತಿಂಗಳಿನ ಒಳಗಿನವರು’ ಎಂದು ಅಲ್ಲಿನ ಆರೋಗ್ಯ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT