ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮಿಕ್ರಾನ್‌: ಆಫ್ರಿಕಾದ 6 ದೇಶಗಳಿಂದ ವಿಮಾನ ಸಂಚಾರ ನಿಷೇಧಿಸಿದ ವಿವಿಧ ರಾಷ್ಟ್ರಗಳು

Last Updated 27 ನವೆಂಬರ್ 2021, 10:05 IST
ಅಕ್ಷರ ಗಾತ್ರ

ಕೊಲಂಬೊ/ಬ್ಯಾಂಕಾಕ್/ಕೈರೊ: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ ರೂಪಾಂತರ ತಳಿ ‘ಓಮಿಕ್ರಾನ್‌’ನ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಜಾಗತಿಕವಾಗಿ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಅನೇಕ ರಾಷ್ಟ್ರಗಳು ಆಫ್ರಿಕಾದ 6 ದೇಶಗಳಿಂದ ವಿಮಾನ ಸಂಚಾರವನ್ನು ನಿಷೇಧಿಸಿವೆ.

ರೂಪಾಂತರ ತಳಿ ಸೋಂಕು ಪ್ರಸರಣ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ದೇಶಗಳು ಇಂಥ ಕ್ರಮಕ್ಕೆ ಮುಂದಾಗಿವೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಆರು ದೇಶಗಳ ಪ್ರಯಾಣಿಕರಿಗೆ ಶ್ರೀಲಂಕಾ ಭಾನುವಾರದಿಂದ ಪ್ರವೇಶ ನಿರ್ಬಂಧಿಸಿದೆ ಎಂದು ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ‘ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಜಿಂಬಾಬ್ವೆ, ನಮೀಬಿಯಾ, ಲೆಸೊಥೊ ಮತ್ತು ಇಸ್ವಾಟಿನಿಯಿಂದ ಆಗಮಿಸುವವರು ಭಾನುವಾರದಿಂದ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ’ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಆರು ರಾಷ್ಟ್ರಗಳಿಂದ ವಿಮಾನಗಳ ಸಂಚಾರಕ್ಕೆ ನ.28ರಿಂದ ಅನ್ವಯವಾಗುವಂತೆ ಓಮಾನ್‌ ನಿಷೇಧ ಹೇರಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ 8 ರಾಷ್ಟ್ರಗಳಿಂದ ವಿಮಾನಗಳ ಸಂಚಾರದ ಮೇಲೆ ಥಾಯ್ಲೆಂಡ್‌ ಕೂಡ ನಿಷೇಧ ಹೇರಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ತಿಳಿಸಿದೆ.

‘ಆಫ್ರಿಕಾದ 8 ದೇಶಗಳಿಂದ ಪ್ರಯಾಣಿಸಲು ಈಗಾಗಲೇ ಅನುಮತಿ ಪಡೆದಿರುವವರು, ಥಾಯ್ಲೆಂಡ್‌ಗೆ ಬಂದಿಳಿದ ಕೂಡಲೇ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗುವುದನ್ನು ಕಡ್ಡಾಯ ಮಾಡಲಾಗಿದೆ’ ಎಂದು ಥಾಯ್ಲೆಂಡ್‌ ಆರೋಗ್ಯ ಇಲಾಖೆಯ ಪ್ರಧಾನ ನಿರ್ದೇಶಕ ಒಪಸ್‌ ಕರ್ನ್‌ಕವಿನ್‌ಪಾಂಗ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT