ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ಸಂಸದೆ ಒಮರ್‌ ಭೇಟಿ ಅಧಿಕೃತ ಪ್ರವಾಸವಲ್ಲ: ಅಮೆರಿಕ ಸ್ಪಷ್ಟನೆ

Last Updated 22 ಏಪ್ರಿಲ್ 2022, 13:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ಇಸ್ಲಾಮಾಬಾದ್‌: ‘ಸಂಸತ್ ಸದಸ್ಯೆ ಇಲ್ಹಾನ್‌ ಒಮರ್‌ ಅವರು ಕೈಗೊಂಡಿರುವ ಪಾಕಿಸ್ತಾನ ಪ್ರವಾಸವು ಸರ್ಕಾರ ಪ್ರಾಯೋಜಿತ ಭೇಟಿಯಲ್ಲ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್‌ ಪ್ರೈಸ್‌ ತಿಳಿಸಿದ್ದಾರೆ.

ನಾಲ್ಕು ದಿನಗಳ ಪಾಕಿಸ್ತಾನ ಪ್ರವಾಸದಲ್ಲಿರುವ ಒಮರ್ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ)ಗುರುವಾರ ಭೇಟಿ ನೀಡಿದ್ದರು. ಕದನ ವಿರಾಮ ಒಪ್ಪಂದದ ನಂತರ ಎಲ್‌ಒಸಿ ಬಳಿ ಇರುವ ಸ್ಥಿತಿ ಕುರಿತು ಅವರಿಗೆ ಮಾಹಿತಿ ನೀಡಲಾಯಿತು ಎಂದು ಪಾಕಿಸ್ತಾನ ಅಧಿಕಾರಿಗಳು ಹೇಳಿದ್ದರು.

ಒಮರ್ ಅವರು ಪಿಒಕೆಗೆ ಭೇಟಿ ನೀಡಿದ್ದನ್ನು ಟೀಕಿಸಿದ್ದ ಭಾರತ, ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು. ಇದರ ಬೆನ್ನಲ್ಲೇ ಈಗ ಅಮೆರಿಕ ವಿದೇಶಾಂಗ ಇಲಾಖೆಯಿಂದ ಸ್ಪಷ್ಟನೆ ಹೊರಬಿದ್ದಿದೆ.

‘ಪಿಒಕೆಗೆ ಅಮೆರಿಕ ಸಂಸದೆ ಇಲ್ಹಾನ್‌ ಒಮರ್‌ ಭೇಟಿ ನೀಡಿದ್ದನ್ನು ಗಮನಿಸಿದ್ದೇವೆ. ಇಂಥ ಕೀಳು ರಾಜಕಾರಣವನ್ನು ಅವರು ತಮ್ಮ ದೇಶದಲ್ಲಿ ಮಾಡಲಿ. ಆದರೆ, ನಮ್ಮ ಸಮಗ್ರತೆ– ಸಾರ್ವಭೌಮತೆಯನ್ನು ಉಲ್ಲಂಘಿಸಿದ್ದು ಸರಿಯಲ್ಲ. ಅವರ ಈ ನಡೆಯನ್ನು ಭಾರತ ಖಂಡಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT