ಲಂಡನ್: 10 ದಿನಗಳ ಕ್ವಾರಂಟೈನ್ ಮುಗಿಸಿದ ಬಳಿಕವೂ ಸಾರ್ಸ್-ಕೋವ್-2 ಸೋಂಕು ಕೆಲವರಲ್ಲಿ ಸಕ್ರಿಯವಾಗಿರುತ್ತದೆ. ಇದು ಕೋವಿಡ್ 19 ರೋಗಕ್ಕೆ ಕಾರಣವಾಗುತ್ತದೆ. ಕೆಲವರ ದೇಹದಲ್ಲಿ 68 ದಿನಗಳವರೆಗೂ ಸೋಂಕು ಸಕ್ರಿಯವಾಗಿರುತ್ತದೆ. ಇದರಿಂದ ಬೇರೆಯವರಿಗೆ ಕೋವಿಡ್ 19 ತಗುಲಬಹುದಾದ ಅಪಾಯ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಹತ್ತು ಮಂದಿ ಪೈಕಿ ಓರ್ವನಲ್ಲಿ ಸೋಂಕು ಹಾಗೆಯೇ ಉಳಿದಿರುವ ಸಾಧ್ಯತೆ ಇದೆ. 10 ದಿನಗಳ ಬಳಿಕ ಯಾವುದೇ ಗುಣಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಕೋವಿಡ್ ಇಲ್ಲ ಎಂದು ನಿರ್ಧರಿಸುವಂತಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

'ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಇನ್‌ಫೆಕ್ಷಿಯಸ್ ಡಿಸೀಸಸ್'ನಲ್ಲಿ ಸಂಶೋಧನಾ ವರದಿ ಪ್ರಕಟಗೊಂಡಿದೆ. ಪಿಸಿಆರ್ ಟೆಸ್ಟ್‌ನಲ್ಲಿ ಕೋವಿಡ್ ದೃಢ ಪಟ್ಟಿದ್ದ ಇಂಗ್ಲೆಂಡ್‌ನ 176 ಮಂದಿಯ ಮಾದರಿಗಳನ್ನು ಪಡೆದು ಪರೀಕ್ಷೆ ನಡೆಸಲಾಗಿತ್ತು. ಶೇಕಡಾ 13ರಷ್ಟು ಮಂದಿಯಲ್ಲಿ 10 ದಿನಗಳ ನಂತರವೂ ಸೋಂಕು ಸಕ್ರಿಯ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ದುರ್ಬಲ ವ್ಯಕ್ತಿಗಳಿಂದ ಕೋವಿಡ್ 19 ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಹೊಸ ಅಧ್ಯಯನ ಸಹಕಾರಿಯಾಗಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.