ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ಚೀನಾ ಪ್ರಜೆಗಳಿದ್ದ ಬಸ್ ಮೇಲೆ ಆತ್ಮಾಹುತಿ ಬಾಂಬರ್ ದಾಳಿ; 2 ಮಕ್ಕಳು ಸಾವು

Last Updated 21 ಆಗಸ್ಟ್ 2021, 14:46 IST
ಅಕ್ಷರ ಗಾತ್ರ

ಕರಾಚಿ/ಇಸ್ಲಾಮಾಬಾದ್: ಪಾಕಿಸ್ತಾನದ ನೈರುತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಶುಕ್ರವಾರ ಚೀನಾ ಪ್ರಜೆಗಳನ್ನು ಸಾಗಿಸುತ್ತಿದ್ದ ವಾಹನದ ಸಮೀಪ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡಿದ್ದು, ಎರಡು ಮಕ್ಕಳ ಹತ್ಯೆಯಾಗಿದ್ದು, ಚೀನಿ ಪ್ರಜೆ ಸೇರಿ ಮೂವರು ಗಾಯಗೊಂಡಿದ್ದಾರೆ.

ಬಂದರು ನಗರವಾದ ಗ್ವಾದರ್‌ನ ಬಲೂಚ್ ವಾರ್ಡ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಚೀನಾದ ಹೂಡಿಕೆ ಮತ್ತುಕಾರ್ಮಿಕರ ಉಪಸ್ಥಿತಿ ಇರುವ ಕಾರಣದಿಂದ ಇದು ಆಯಕಟ್ಟಿನ ಮಹತ್ವದ ಪ್ರದೇಶ ಎನಿಸಿಕೊಂಡಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ಮತ್ತು ಪೊಲೀಸರು ತಿಳಿಸಿದ್ದಾರೆ.

‘ಆತ್ಮಾಹುತಿ ಬಾಂಬರ್ ವಾಹನದ ಹತ್ತಿರ ಬಂದು ತನ್ನನ್ನು ತಾನು ಸ್ಫೋಟಿಸಿಕೊಂಡ. ಸಮೀಪದಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದರು. ಒಬ್ಬ ಚೀನಿ ಪ್ರಜೆಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನದ ಚಾಲಕ ಸೇರಿ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗ್ವಾದರ್‌ನ ಜಿಡಿಎ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಬಲೂಚಿಸ್ತಾನ ಸರ್ಕಾರದ ವಕ್ತಾರ ಲಿಯಾಖತ್ ಶಹವಾನಿ ಹೇಳಿದ್ದಾರೆ.

ಚೀನಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಯಲ್ಲಿ ಇದು ತಿಂಗಳಲ್ಲಿ ಎರಡನೇಯದು. ಕಳೆದ ತಿಂಗಳು ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಭಯೋತ್ಪಾದಕರಆತ್ಮಾಹುತಿ ದಾಳಿಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಚೀನಿಯರು ಸೇರಿ 13 ಜನರು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT