ಸೋಮವಾರ, ಅಕ್ಟೋಬರ್ 25, 2021
25 °C

ಅಫ್ಗನ್‌: ಗಡ್ಡ ತೆಗೆಸದಂತೆ ನಿರ್ಬಂಧ, ಕಟು ಶಿಕ್ಷೆಯ ಎಚ್ಚರಿಕೆ ನೀಡಿದ ತಾಲಿಬಾನ್

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್: ಅಫ್ಗಾನಿಸ್ತಾನದ ದಕ್ಷಿಣ ಪ್ರಾಂತ್ಯ ಹೆಲ್‌ಮಂಡ್‌ನಲ್ಲಿ ಇನ್ನು ಮುಂದೆ ಗಡ್ಡವನ್ನು ತೆಗೆಸುವುದು, ಆಕರ್ಷಕಗೊಳಿಸುವುದು ನಿಷಿದ್ಧ. ತಾಲಿಬಾನ್‌ ಆಡಳಿತವು ಈ ಕುರಿತು ಆದೇಶವನ್ನು ಹೊರಡಿಸಿದೆ.

ಗಡ್ಡ ತೆಗೆಯುವುದು, ಆಕರ್ಷಕಗೊಳಿಸುವುದು ಶರಿಯಾ ಅಥವಾ ಇಸ್ಲಾಮಿಕ್‌ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅಫ್ಗಾನಿಸ್ತಾನದ ಹೆಲ್‌ಮಂಡ್‌ ಪ್ರಾಂತ್ಯದ ಸ್ಥಳೀಯ ತಾಲಿಬಾನ್‌ ಸರ್ಕಾರ ಆದೇಶದಲ್ಲಿ ಪ್ರತಿಪಾದಿಸಿದೆ.

‘ಈ ಸುದ್ದಿ ಕೇಳಿದಾಗಿನಿಂದ ನನ್ನ ಹೃದಯ ಚೂರಾದಂತಾಗಿದೆ. ಈ ನಗರದಲ್ಲಿ ಎಲ್ಲರೂ ತಮ್ಮಿಷ್ಟದ ಜೀವನಶೈಲಿ ಅನುಸರಿಸುತ್ತಿದ್ದರು, ಇಷ್ಟದಂತೆ ಬದುಕುತ್ತಿದ್ದರು‘ ಎಂದು ಸ್ಥಳೀಯರಾದ ಬಿಲಾಲ್‌ ಅಹ್ಮದ್‌ ಪ್ರತಿಕ್ರಿಯಿಸಿದರು.

ತಾಲಿಬಾನ್‌ ಈ ಹಿಂದೆ ಆಡಳಿತ ನಡೆಸಿದಾಗ ಇಸ್ಲಾಂನ ಕಟು ವಿಶ್ಲೇಷಣೆ ಮಾಡಿ ನಿಯಮ ಜಾರಿಗೊಳಿಸುತ್ತಿತ್ತು. ತಾಲಿಬಾನ್‌ ಆಡಳಿತ ಮತ್ತೆ ಶುರುವಾದಾಗ ಆ ದಿನಗಳು ಮರಳಲಿವೆಯೇ ಎಂದು ಜಗತ್ತು ಗಮನಿಸುತ್ತಿತ್ತು.

ಇದನ್ನೂ ಓದಿ... 2 ತಿಂಗಳಲ್ಲಿ ಮೊದಲ ಬಾರಿ ಪೆಟ್ರೋಲ್‌ ದರ ಲೀಟರ್‌ಗೆ 20 ಪೈಸೆ ಏರಿಕೆ

ಆ ದಿನಗಳು ಮರಳುವುದರ ಸೂಚನೆಯಾಗಿ ಶನಿವಾರ ತಾಲಿಬಾನ್‌ ಯೋಧರು ನಾಲ್ವರು ಅಪಹರಣಕಾರರನ್ನು  ಕೊಂದು ಬಳಿಕ ಸಾರ್ವಜನಿಕವಾಗಿ ಶವಗಳನ್ನು ನೇತುಹಾಕಿದ್ದರು. ಈಗ ಗಡ್ಡ, ಕ್ಷೌರ ಕುರಿತ ಆದೇಶ ಬಂದಿದೆ.

‘ನಿಯಮ ಉಲ್ಲಂಘಿಸಿದವರನ್ನು ಕಟುಶಿಕ್ಷೆಗೆ ಗುರಿಪಡಿಸಲಾಗುವುದು, ದೂರು ಕೊಡುವಂತೆ ಇಲ್ಲ‘ ಎಂದು ಕ್ಷೌರಿಕರನ್ನು ಉದ್ದೇಶಿಸಿ ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಶಿಕ್ಷೆಯ ಸ್ವರೂಪವನ್ನು ತಿಳಿಸಿಲ್ಲ.

ಕ್ಷೌರದ ಮಳಿಗೆ ಮಾಲೀಕ ಜಲಾಲುದ್ದೀನ್‌, ತಾಲಿಬಾನ್ ಆದೇಶ ಮರುಪರಿಶೀಲಿಸುವ ವಿಶ್ವಾಸ ವ್ಯಕ್ತಪಡಿಸಿದರು. ‘ಇದರಿಂದ ನಮ್ಮ ವೃತ್ತಿಗೆ ಧಕ್ಕೆಯಾಗಲಿದೆ ಎನ್ನುತ್ತಾರೆ‘ ಮತ್ತೊಂದು ಅಂಗಡಿ ಮಾಲೀಕ ಶೇರ್ ಅಫ್ಜಲ್‌ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು