ರಿಯೊ ಡಿ ಜನೈರೊ: ಬ್ರೆಜಿಲ್‌ನ ಅಮೆಜಾನ್‌ನಲ್ಲಿ ಶುಕ್ರವಾರ ಟ್ರಾನ್ಸಮಿಷನ್ ಗೋಪುರವೊಂದು ಕುಸಿದುಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಹದಿಮೂರು ಮಂದಿ ಗಾಯಗೊಂಡಿದ್ದಾರೆ.

ಪಾರಾದ ರಾಜಧಾನಿ ಬೆಲೆಂನ ನೈರುತ್ಯ ದಿಕ್ಕಿನಲ್ಲಿರುವ ಪಕಾಜಾ ಮತ್ತು ಅನಾಪು ನಗರಗಳ ನಡುವಿರುವ ಈ ಟ್ರಾನ್ಸ್‌ಮಿಷನ್ ಗೋಪುರ ಕುಸಿದುಬಿದ್ದಿದೆ.

ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ನಿರ್ಮಾಣ ಕಾರ್ಯ ನಡೆಯುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ ಎಂದು ಸರ್ಕಾರಿ ಅಧಿಕಾರಿ ಹೆಲ್ಡೆರ್ ಬರ್ಬಲ್ಹೋ ಟ್ವೀಟ್ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಪಕಾಜಾ ನಗರ ಸ್ಥಳೀಯ ಸಂಸ್ಥೆ ’ಈ ಘಟನೆಗೂ ಎಸ್‌ಕೆ ಎಂಬ ಕಂಪನಿಗೂ ಸಂಬಂಧವಿದೆ’ ಎಂದು ಹೇಳಿದ್ದು, ಇದು ಬ್ರೆಜಿಲ್ ಕಂಪನಿಯೊ ಅಥವ ವಿದೇಶಿ ಕಂಪನಿಯೋ ಎಂಬುದನ್ನು ಅದು ಖಚಿತಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.