ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌–1ಬಿ ವೀಸಾ: ಗಣಕೀಕೃತ ಲಾಟರಿ ವ್ಯವಸ್ಥೆ ರದ್ದತಿಗೆ ಪ್ರಸ್ತಾವನೆ

Last Updated 29 ಅಕ್ಟೋಬರ್ 2020, 5:50 IST
ಅಕ್ಷರ ಗಾತ್ರ

ವಾಷಿಂಗ್ಟನ್:ತಂತ್ರಜ್ಞಾನ ವೃತ್ತಿಪರರಿಗೆ ಅಮೆರಿಕ ಪ್ರವೇಶಕ್ಕೆ ನೀಡಲಾಗುವ ಎಚ್‌–1ಬಿ ಉದ್ಯೋಗ ವೀಸಾ ನೀಡಲು ಈಗಿರುವ ಗಣಕೀಕೃತ ಲಾಟರಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ವೇತನ ಮಟ್ಟ ಆಧರಿತ ಆಯ್ಕೆ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಯೋಜನೆ ಜಾರಿಗೆ ತರಲು ಟ್ರಂಪ್ ಆಡಳಿತ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.

ಇದು ಅನುಷ್ಠಾನಗೊಂಡರೆ ಅಮೆರಿಕದ ನೌಕರರುಎದುರಿಸುತ್ತಿರುವ ವೇತನ ಕಡಿತದ ಒತ್ತಡವನ್ನು ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ.

ಹೊಸ ವ್ಯವಸ್ಥೆ ಕುರಿತು ಅಧಿಸೂಚನೆ ಫೆಡರಲ್‌ ರಿಜಿಸ್ಟರ್‌ನಲ್ಲಿ ಗುರುವಾರ ಪ್ರಕಟವಾಗಿದೆ. ಸಹ ಸಂಸ್ಥೆಗಳು ಅಧಿಸೂಚನೆ ಪ್ರಕಟಗೊಂಡ 30 ದಿನಗಳೊಗೆ ತಮ್ಮ ಆಕ್ಷೇಪಣೆ, ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಡಿಪಾರ್ಟ್‌ಮೆಂಟ್‌ (ಡಿಎಚ್‌ಎಸ್‌) ತಿಳಿಸಿದೆ.

ಎಚ್‌–1ಬಿ ವೀಸಾ ಅರ್ಜಿದಾರರನ್ನು ನಿರ್ಧರಿಸುವುದಕ್ಕಾಗಿ ಗಣಕೀಕೃತ ಲಾಟರಿ ವ್ಯವಸ್ಥೆಯನ್ನು ಬದಲಿಸಬೇಕಿದೆ.ಇದು ಅಮೆರಿಕದ ಕಾರ್ಮಿಕರ ವೇತನ ಕಡಿತದ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಡಿಎಚ್‌ಎಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT