ಶನಿವಾರ, ಆಗಸ್ಟ್ 13, 2022
24 °C
ಮಾದಕ ವಸ್ತುಗಳ ಕಳ್ಳಸಾಗಣೆ ರಾಷ್ಟ್ರಗಳಲ್ಲಿ ಭಾರತ; ಟ್ರಂಪ್

ಮಾದಕ ವಸ್ತು ಕಳ್ಳಸಾಗಣೆ ವಿರುದ್ಧ ಅಮೆರಿಕ ಹೋರಾಟ: ಡೊನಾಲ್ಡ್‌ ಟ್ರಂಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತ ಸೇರಿದಂತೆ 20 ರಾಷ್ಟ್ರಗಳನ್ನು ಅಕ್ರಮ ಮಾದಕ ವಸ್ತುಗಳ ಸಾಗಣೆದಾರ ಅಥವಾ ಅಕ್ರಮ ಮಾದಕ ವಸ್ತುಗಳ ಉತ್ಪಾದನಾ ರಾಷ್ಟ್ರಗಳೆಂದು ಗುರುತಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಆಡಳಿತವು, ಮಾದಕ ವಸ್ತುಗಳ ಅಕ್ರಮ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಅಫ್ಗಾನಿಸ್ತಾನ, ಭಾರತ, ದಿ ಬಹಾಮಾಸ್, ಕೊಲಂಬಿಯಾ, ಕೋಸ್ಟಾ ರಿಕಾ ಮತ್ತು ಡೊಮಿನಿಕನ್ ರಿಪಬ್ಲಿಕ್ ಸೇರಿದಂತೆ ಇಪ್ಪತ್ತು ರಾಷ್ಟ್ರಗಳನ್ನು ಹೆಸರಿಸಿರುವ ಟ್ರಂಪ್‌, ಈ ರಾಷ್ಟ್ರಗಳು ಪ್ರಮುಖ ಮಾದಕ ವಸ್ತುಗಳನ್ನು ಅಕ್ರಮವಾಗಿ ಉತ್ಪಾದಿಸುವ ರಾಷ್ಟ್ರಗಳಾಗಿವೆ ಎಂದು ಹೇಳಿದ್ದಾರೆ.

‘ಬೊಲಿವಿಯಾ ಮತ್ತು ವೆನಿಜುಯೆಲಾದ ನಿಕೊಲಾಸ್ ಮಡ್ಯುರೊ ಆಡಳಿತವು ಕಳೆದ ಹನ್ನೆರಡು ತಿಂಗಳಲ್ಲಿ ಅಂತರರಾಷ್ಟ್ರೀಯ  ಮಾದಕ ವಸ್ತುಗಳ ವಿರೋಧಿ ಒಪ್ಪಂದದ ಅಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ‘ ಎಂದು ಹೇಳಿದ್ದಾರೆ.

ಕೊಲಂಬಿಯಾದ ಅಧ್ಯಕ್ಷ ಇವಾನ್ ಡುಕ್ ಆಡಳಿತ ಅಮೆರಿಕದೊಂದಿಗೆ ಬಲವಾದ ಪಾಲುದಾರನಾಗಿ ಉಳಿದುಕೊಂಡಿದೆ ಮತ್ತು ಕೊಲಂಬಿಯಾದ ಪೊಲೀಸರು ಮತ್ತು ಸೇನಾಪಡೆಗಳು ಪ್ರಮುಖ ಮಾದಕವಸ್ತು ಕಳ್ಳಸಾಗಣೆದಾರರನ್ನು ಗುರಿಯಾಗಿಸಿಕೊಂಡು ಹೋರಾಡುತ್ತಿವೆ. ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣದ ವಿಚಾರದಲ್ಲಿ ಧೈರ್ಯ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ‘ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು