ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಷಿಕ ರಕ್ಷಣಾ ಮಸೂದೆ ತಿರಸ್ಕರಿಸಿದ ಟ್ರಂಪ್‌

ರಾಷ್ಟ್ರದ ಭದ್ರತೆಗೆ ಅಪಾಯವೊಡ್ಡುವ ಅಂಶಗಳಿವೆ: ಅಧ್ಯಕ್ಷರ ಪ್ರತಿಪಾದನೆ
Last Updated 24 ಡಿಸೆಂಬರ್ 2020, 5:46 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಾರ್ಷಿಕ ರಕ್ಷಣಾ ಮಸೂದೆಯನ್ನು ತಿರಸ್ಕರಿಸಿದ್ದಾರೆ. ಮಸೂದೆಯ ಕೆಲವು ಅಂಶಗಳು ರಾಷ್ಟ್ರದ ಭದ್ರತೆಗೆ ಅಪಾಯವೊಡ್ಡಲಿವೆ ಎಂಬ ಕಾರಣ ನೀಡಿ ಅವರು ಈ ಕ್ರಮ ಕೈಗೊಂಡಿದ್ದಾರೆ.

ಆದರೆ, ಟ್ರಂಪ್‌ ಅವರ ಈ ವಿರೋಧವನ್ನು ಲೆಕ್ಕಿಸದೇ ಮಸೂದೆಗೆ ಅನುಮೋದನೆ ನೀಡಲು ಸಂಸತ್‌ನ ಉಭಯ ಸದನಗಳು ಮುಂದಾಗಿವೆ.

₹ 54.53 ಲಕ್ಷ ಕೋಟಿ ಗಾತ್ರದ ನ್ಯಾಷನಲ್‌ ಡಿಫೆನ್ಸ್‌ ಆಥರೈಜೇಶನ್ ಆ್ಯಕ್ಟ್‌ಗೆ (ಎನ್‌ಡಿಎಎ) ಸಂಸತ್‌ನ ಕೆಳಮನೆ (ಹೌಸ್‌ ಆಫ್‌ ರೆಪ್ರೆಸಂಟೇಟಿವ್ಸ್‌) 335–78 ಮತಗಳಿಂದ ಅನುಮೋದನೆ ನೀಡಿತ್ತು. ಸೆನೆಟ್‌ ಈ ಮಸೂದೆಯನ್ನು 84–13 ಮತಗಳಿಂದ ಅನುಮೋದಿಸಿತ್ತು.

ಟ್ರಂಪ್‌ ಅವರ ಈ ನಡೆಗೆ ಹಿರಿಯ ಸಂಸದರಿಂದ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಕೆಳಮನೆಯ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು, ‘ಟ್ರಂಪ್‌ ಕೈಗೊಂಡಿರುವುದು ಅತ್ಯಂತ ದುಡುಕಿನ ನಿರ್ಧಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಡಿ.28ರಂದು ಅಧಿವೇಶನ ನಡೆಯಲಿದ್ದು, ಪಕ್ಷಭೇದ ಮರೆತು ಈ ಮಸೂದೆಯನ್ನು ಅಂಗೀಕರಿಸಲಾಗುವುದು’ ಎಂದೂ ಪೆಲೋಸಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT