ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೋನೇಷ್ಯಾ | 26 ಮಂದಿ ರೋಹಿಂಗ್ಯಾಗಳ ಸಾವು

Last Updated 28 ಡಿಸೆಂಬರ್ 2022, 1:51 IST
ಅಕ್ಷರ ಗಾತ್ರ

ಪಿದೈ (ಇಂಡೋನೇಷ್ಯಾ):ಇಂಡೋನೇಷ್ಯಾದಲ್ಲಿ ಸುರಕ್ಷಿತ ನೆಲೆ ಅರಸಿ ವಲಸೆ ಹೊರಟಿದ್ದ ರೋಹಿಂಗ್ಯಾ ಸಮುದಾಯದ ನಿರಾಶ್ರಿತರಲ್ಲಿ 26 ಜನರುಒಂದು ತಿಂಗಳು ಕಾಲ ಅಪಾಯಕಾರಿ ರೀತಿಯಲ್ಲಿ ಸಮುದ್ರಯಾನ ಮಾಡಿ, ನಿರ್ಜಲೀಕರಣದಿಂದ ದುರಂತ ಸಾವು ಕಂಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಮಂಗಳವಾರ ಹೇಳಿದೆ.

ಅಚೆಯ ಪಿದೈ ಜಿಲ್ಲೆಯ ಕರಾವಳಿ ಹಳ್ಳಿಯ ತೀರದಲ್ಲಿ ಸೋಮವಾರ ಮರದ ದೋಣಿಯಿಂದ ಇಳಿದ 185 ಪ್ರಯಾಣಿಕರಲ್ಲಿ ಮಹಿಳೆಯರು ಮತ್ತು ಮಕ್ಕಳು ನಿತ್ರಾಣಗೊಂಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ವಿಡಿಯೊಗಳಲ್ಲಿಅನೇಕರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದ, ರೋದಿಸುತ್ತಿದ್ದದೃಶ್ಯಗಳು ಹೃದಯ ಹಿಂಡುವಂತಿವೆ.

‘ಹಲವು ದಿನಗಳ ಸಮುದ್ರಯಾನ ನಡೆಸಿರುವ ವಲಸಿಗ ನಿರಾಶ್ರಿತರು ನಿರ್ಜಲೀಕರಣ ಮತ್ತು ಬಳಲಿಕೆಯಿಂದ ತುಂಬಾ ಅಸಕ್ತ ಸ್ಥಿತಿಯಲ್ಲಿದ್ದಾರೆ’ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಫೌಜಿ ಹೇಳಿದ್ದಾರೆ.

ಸುದೀರ್ಘ ಪ್ರಯಾಣದಲ್ಲಿ ಎದುರಾದ ದೈತ್ಯ ಅಲೆಗಳ ಹೊಡೆತ ಮತ್ತು ಅನಾರೋಗ್ಯದಿಂದ 26 ಜನರು ಮೃತಪಟ್ಟರು. ಅವರ ಶವಗಳನ್ನು ಸಮುದ್ರದಲ್ಲಿ ಹಾಕಲಾಯಿತು ಬದುಕುಳಿದವರು ತಿಳಿಸಿರುವುದಾಗಿ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಹೇಳಿದ್ದಾರೆ.

180 ಮಂದಿ ವಲಸಿಗರಿದ್ದ ಮತ್ತೊಂದು ದೋಣಿ ಕಣ್ಮರೆಯಾಗಿದ್ದು, ದೋಣಿಯಲ್ಲಿದ್ದವರೆಲ್ಲರೂ ಮೃತಪಟ್ಟಿರುವ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಮಾಹಿತಿ ಸಿಕ್ಕಿದೆ. ಆದರೆ, ಇದನ್ನು ಮಂಡಳಿ ಖಚಿತಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT