ಬುಧವಾರ, ನವೆಂಬರ್ 30, 2022
21 °C

ರಾಣಿ ಎಲಿಜಬೆತ್‌ ಅವರ ಅಪರೂಪದ ಚಿತ್ರವೊಂದನ್ನು ಹಂಚಿಕೊಂಡ ಬ್ರಿಟನ್‌ ರಾಜಮನೆತನ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ರಾಣಿ ಎಲಿಜಬೆತ್ ಅಂತ್ಯಕ್ರಿಯೆ ನಂತರ ಬ್ರಿಟನ್‌ ರಾಜಮನೆತನವು ಅವರ ಅಪರೂಪದ ಫೋಟೊವೊಂದನ್ನು ಸೋಮವಾರ ಬಿಡುಗಡೆ ಮಾಡಿದೆ.

2ನೇ ಎಲಿಜಬೆತ್‌ ಬ್ರಿಟನ್‌ನ ಅತ್ಯಂತ ದೀರ್ಘಾವಧಿಯ ರಾಣಿ ಎನಿಸಿಕೊಂಡಿದ್ದು, ಸೆ. 8ರ ರಾತ್ರಿ ನಿಧನರಾಗಿದ್ದರು. ಸೋಮವಾರ ಸೇಂಟ್‌ ಜಾರ್ಜ್‌ ಚಾಪೇಲ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

1971 ರಲ್ಲಿ ಬಾಲ್ಮೋರಲ್‌ ಎಂಬಲ್ಲಿ ಸೆರೆಹಿಡಿದದ್ದು ಎಂದು ಹೇಳಲಾದ ಚಿತ್ರವನ್ನು ರಾಜಮನೆತನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಈ ಚಿತ್ರಕ್ಕೆ ಶೇಕ್ಸ್‌ಫಿಯರ್‌ನ ಹ್ಯಾಮ್ಲೆಟ್‌ನ ಸಾಲನ್ನು ("May flights of Angels sing thee to thy rest.") ಚಿತ್ರ ಶೀರ್ಷಿಕೆಯನ್ನಾಗಿ ಬಳಸಲಾಗಿದೆ.

ತಾಯಿ (ಎಲಿಜಬೆತ್‌) ಮರಣದ ನಂತರ ಕಿಂಗ್ ಚಾರ್ಲ್ಸ್ III ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಶೇಕ್ಸ್‌ಫಿಯರ್‌ನ ಈ ಸಾಲುಗಳನ್ನು ಉಲ್ಲೇಖಿಸಿದ್ದರು.

ನಂತರ ‘ರಾಣಿಯವರ ಪ್ರೀತಿಯ ನೆನಪಿಗಾಗಿ. 1926 - 2022’ ಎಂದೂ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ರಾಣಿ ಎಲಿಜಬೆತ್‌ ಅವರು ತಲೆಗೆ ಸ್ಕಾರ್ಫ್‌ ತೊಟ್ಟು, ಕನ್ನಡಕ ಧರಿಸಿ, ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು, ನಡೆಯುತ್ತಿರುವ ಸನ್ನಿವೇಶವನ್ನು ಕಲಾತ್ಮಕವಾಗಿ ಸೆರೆ ಹಿಡಿಯಲಾಗಿದೆ. ರಾಜ ಮನೆತನ ಹಂಚಿಕೊಂಡಿರುವ ಈ ಚಿತ್ರ ಸದ್ಯ ವೈರಲ್‌ ಆಗಿದೆ.

ಇವುಗಳನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು