ಬುಧವಾರ, ಆಗಸ್ಟ್ 17, 2022
25 °C

ಉಗ್ರ ಸಂಘಟನೆಗಳ ವಿರುದ್ಧ ತುರ್ತು ಕ್ರಮ: ಪಾಕ್‌ಗೆ ಭಾರತ–ಅಮೆರಿಕ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಪಾಕಿಸ್ತಾನವು ಉಗ್ರ ಸಂಘಟನೆಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ. ತನ್ನ ನಿಯಂತ್ರಣದಲ್ಲಿರುವ ಯಾವ ಪ್ರದೇಶವೂ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆ ಆಗದಂತೆ ಆ ದೇಶ ನೋಡಿಕೊಳ್ಳಬೇಕು ಎಂದು ಭಾರತ– ಅಮೆರಿಕದ ಜಂಟಿ ಹೇಳಿಕೆ ಒತ್ತಾಯಿಸಿದೆ.

ಮುಂಬೈ ದಾಳಿ ಮತ್ತು ಪಠಾನ್‌ಕೋಟ್‌ ವಾಯುನೆಲೆ ಮೇಲೆ ದಾಳಿ ನಡೆಸಿದ ಸಂಚುಕೋರರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಹೇಳಿಕೆ ಆಗ್ರಹಿಸಿದೆ.

ವಿಡಿಯೊ ಸಂಭಾಷಣೆ ಮೂಲಕ ನಡೆದ  ಭಾರತ– ಅಮೆರಿಕ ಭಯೋತ್ಪದನಾ ತಡೆ ಜಂಟಿ ಕಾರ್ಯ ತಂಡದ 17ನೇ ಸಭೆಯ ಬಳಿಕ ಈ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಯೋತ್ಪಾದನಾ ನಿಗ್ರಹ  ಘಟಕದ ಜಂಟಿ ಕಾರ್ಯದರ್ಶಿ ಮಹಾವೀರ್‌ ಸಿಂಘ್ವಿ  ಭಾರತದ ನಿಯೋಗದ ನೇತೃತ್ವ ವಹಿಸಿದ್ದರು. ಅಮೆರಿಕದ ಪರವಾಗಿ ಭಯೋತ್ಪಾದನಾ ತಡೆ ಘಟಕದ ರಾಜ್ಯ ವಿಭಾಗದ ಸಮನ್ವಯಾಧಿಕಾರಿ ನಥಾನ್‌ ಸೇಲ್ಸ್‌ ಪಾಲ್ಗೊಂಡಿದ್ದರು.

ಭಯೋತ್ಪಾದನಾ ಚಟುವಟಿಕೆ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರಕ್ಕೆ ಬೆಂಬಳ ನೀಡುವುದಾಗಿ ಅಮೆರಿಕ ಪುನರುಚ್ಚರಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು