ಬುಧವಾರ, ಮಾರ್ಚ್ 22, 2023
23 °C

ಅಮೆರಿಕದಿಂದ ಉಕ್ರೇನ್‌ಗೆ 2.5 ಶತಕೋಟಿ ಡಾಲರ್‌ ಶಸ್ತ್ರಾಸ್ತ್ರ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌:  ರಷ್ಯಾ ದಾಳಿಯಿಂದ ತತ್ತರಿಸಿರುವ  ಉಕ್ರೇನ್‌ಗೆ ವಾರದೊಳಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲು ಅಮೆರಿಕ ಮುಂದಾಗಿದೆ. ಸುಮಾರು 2.5 ಶತಕೋಟಿ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಯುದ್ಧ ಸಲಕರಣೆ ಪೂರೈಕೆ ಭಾಗವಾಗಿ ಉಕ್ರೇನ್‌ಗೆ 90 ಶಸ್ತ್ರಸಜ್ಜಿತ ಯುದ್ಧ ವಾಹನಗಳನ್ನು ಕಳುಹಿಸಲು ಅಮೆರಿಕ ನಿರ್ಧರಿಸಿದೆ. ಶುಕ್ರವಾರ ಜರ್ಮನಿಯಲ್ಲಿ ನಡೆಯಲಿರುವ ಮಿತ್ರರಾಷ್ಟ್ರಗಳ ಸಭೆಯಲ್ಲಿ ಈ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಉಕ್ರೇನ್ 14 ಚಾಲೆಂಜರ್ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸುವುದಾಗಿ ಬುಧವಾರ ಬ್ರಿಟನ್ ಘೋಷಿಸಿತ್ತು. ಇದರ ಬೆನ್ನಲ್ಲೇ ಅಮೆರಿಕ ಕೂಡ ಉಕ್ರೇನ್‌ ಸಹಾಯಕ್ಕೆ ನಿಂತಿದ್ದು, ಒಂದು ವಾರದಲ್ಲಿ ಈ ನೆರವು ತಲುಪುವ ಸಾಧ್ಯತೆ ಇದೆ. ಇದರೊಂದಿಗೆ ಉಕ್ರೇನ್‌ ಬಲ ಹೆಚ್ಚಾಗಿದೆ.  ಅಮೆರಿಕ, ಫ್ರಾನ್ಸ್ ಮತ್ತು ಜರ್ಮನಿ ಯುದ್ಧ ವಾಹನಗಳನ್ನು ಕಳುಹಿಸಲು ಒಪ್ಪಿಕೊಂಡಿವೆ. ಜರ್ಮನ್ ನಿರ್ಮಿತ ಲೆಪರ್ಡ್ 2 ಯುದ್ಧ ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ತಲುಪಿಸಲು ಜರ್ಮನಿ ಒಪ್ಪಿದೆ.

ಬಿಡೆನ್ ಸರ್ಕಾರ ಬ್ರಾಡ್ಲೀಸ್ ಯುದ್ಧ ವಾಹನ ಒಳಗೊಂಡಂತೆ  3 ಶತಕೋಟಿ ಡಾಲರ್‌ ಮಿಲಿಟರಿ ಸಹಾಯದ ಪ್ಯಾಕೇಜ್ ಅನ್ನು ಘೋಷಿಸಿತ್ತು. ಇದು ಪೂರ್ವದ ಡಾನ್ಬಾಸ್ ಪ್ರದೇಶದಲ್ಲಿ ರಷ್ಯಾ ವಿರುದ್ಧ ಹೋರಾಡುವ ಉಕ್ರೇನಿಯನ್ ಸೇನೆಗೆ ವಿಶೇಷವಾಗಿ ಸಹಾಯಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು