ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಿದ ಅಮೆರಿಕ

Last Updated 29 ಡಿಸೆಂಬರ್ 2022, 2:51 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೋವಿಡ್ ಉಲ್ಬಣಗೊಂಡಿರುವ ಚೀನಾದಿಂದ ಆಗಮಿಸುವ ಪ್ರಯಾಣಿಕರಿಗೆ ಅಮೆರಿಕ ನಿರ್ಬಂಧ ಹೇರಿದೆ. ಚೀನಾ ಪ್ರಯಾಣಿಕರು ಅಮೆರಿಕಕ್ಕೆ ತೆರಳುವ ವಿಮಾನ ಹತ್ತುವ ಮೊದಲು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತೋರಿಸಬೇಕು ಎಂದು ಎಎನ್‌ಐ ಟ್ವೀಟಿಸಿದೆ.

ಕೋವಿಡ್ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹೊರತಾಗಿಯೂ ಚೀನಾ ಸರ್ಕಾರವು, ಜನವರಿ 8ರಿಂದ ಗಡಿಗಳನ್ನು ತೆರೆಯುವ ಜೊತೆಗೆ ದೇಶಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನಿರ್ಬಂಧವನ್ನು ತೆಗೆದುಹಾಕಿತ್ತು. ಅಲ್ಲದೆ, ವೈಜ್ಞಾನಿಕ ಆಧಾರದ ಮೇಲೆ ಕೋವಿಡ್ ನಿಯಮಾವಳಿಗಳನ್ನು ಜಾರಿ ಮಾಡಬೇಕು ಎಂದಿದ್ದ ಚೀನಾ, ತಮ್ಮಲ್ಲಿ ಕೋವಿಡ್ ಹೆಚ್ಚಳ ಕುರಿತಂತೆ ವರದಿ ಮಾಡಿದ ಮಾಧ್ಯಮಗಳು ಮತ್ತು ದೇಶಗಳನ್ನು ಟೀಕಿಸಿತ್ತು.

ಇದರ ಬೆನ್ನಲ್ಲೇ ಹಲವು ರಾಷ್ಟ್ರಗಳು ಚೀನಾದಿಂದ ಬರುವವರಿಗೆ ನಿರ್ಬಂಧ ವಿಧಿಸಿದ್ದವು. ಇದೀಗ, ಅಮೆರಿಕ ಸಹ ಅದೇ ನಿರ್ಧಾರಕ್ಕೆ ಬಂದಿದೆ.

ಭಾರತ ಸೇರಿದಂತೆ ಇಟಲಿ, ಜಪಾನ್, ಅಮೆರಿಕ, ತೈವಾನ್ ದೇಶಗಳು ಚೀನಾ ಪ್ರಯಾಣಿಕರಿಗೆ ನಿರ್ಬಂಧಗಳನ್ನು ವಿಧಿಸಿವೆ.

ಆದರೆ, ಬ್ರಿಟನ್ ಮಾತ್ರ ದೇಶಕ್ಕೆ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ಕಡ್ಡಾಯ ಅಥವಾ ಮುಂತಾದ ಯಾವುದೇ ಕೋವಿಡ್ ಸಂಬಂಧಿತ ನಿರ್ಬಂಧ ಹೇರಿಕೆಯ ಚಿಂತನೆ ಇಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT