ಮಂಗಳವಾರ, ಜೂನ್ 22, 2021
27 °C

ಸ್ವಾತಂತ್ರ್ಯೋತ್ಸವ: ಭಾರತೀಯರಿಗೆ ಶುಭಾಶಯ ಕೋರಿದ ಅಮೆರಿಕ ಸಂಸದರು, ಅಧಿಕಾರಿಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತದ 74ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಅಮೆರಿಕದ ಸಂಸದರು ಹಾಗೂ ಉನ್ನತ ಅಧಿಕಾರಿಗಳು ಇಲ್ಲಿರುವ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.

ಡೆಮಾಕ್ರಾಟಿಕ್‌ ಮತ್ತು ರಿಪಬ್ಲಿಕನ್‌ ಸಂಸದರು ಶುಭಾಶಯ ಕೋರಿದ್ದಲ್ಲದೇ, ಉಭಯ ದೇಶಗಳು ಅನುಸರಿಸುವ ಮೌಲ್ಯಗಳಲ್ಲಿ ಸಾಮ್ಯತೆ ಇವೆ. ಎರಡೂ ದೇಶಗಳ ಬಾಂಧವ್ಯ ಗಟ್ಟಿಯಾಗಲು ಇಂಥ ಮೌಲ್ಯಗಳೇ ಕಾರಣ ಎಂದೂ ಹೇಳಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅವರ ಮಗ ಡೊನಾಲ್ಡ್‌ ಜೆ.ಟ್ರಂಪ್‌ ಜೂನಿಯರ್, ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಿರುವ ಡೆಮಾಕ್ರಾಟಿಕ್ ಪಕ್ಷದ ಜೊ ಬಿಡೆನ್, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಸೇರಿದಂತೆ ಹಲವಾರು ಸಂಸದರು ಶುಭಾಶಯ ಕೋರಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು