ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ವಲಸೆ ನೀತಿ ರದ್ದುಗೊಳಿಸಿ ಆದೇಶ ಹೊರಡಿಸಿದ ಜೋ ಬೈಡನ್

Last Updated 3 ಫೆಬ್ರುವರಿ 2021, 3:32 IST
ಅಕ್ಷರ ಗಾತ್ರ

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ ಟ್ರಂಪ್ ಆಡಳಿತದ ವಲಸೆ ನೀತಿ ರದ್ದುಗೊಳಿಸುವ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ವ್ಯವಸ್ಥೆ ನೀತಿಯಲ್ಲಿ ಕಳವಳವನ್ನು ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ದಕ್ಷಿಣ ಗಡಿಯಲ್ಲಿ ಬೇರ್ಪಟ್ಟ ವಲಸೆ ಕುಟುಂಬಗಳನ್ನು ಮತ್ತೆ ಪೋಷಕರೊಂದಿಗೆ ಒಂದುಗೂಡಿಸುವುದು ಸೇರಿದಂತೆ ಮೂರು ಪ್ರಮುಖ ವಲಸೆ ನೀತಿಗಳಿಗೆ ಸಹಿ ಹಾಕಿದ್ದಾರೆ.

ಡೊನಾಲ್ಡ್ ಟ್ರಂಪ್ 'ಶೂನ್ಯ ಸಹನೆ' ವಲಸೆ ನೀತಿಯಿಂದಾಗಿ ಅನೇಕ ಕುಟುಂಬಗಳ ಹೆತ್ತವರು ತಮ್ಮ ಮಕ್ಕಳಿಂದ ಬೇರ್ಪಟ್ಟಿದ್ದರು. ಕುಟುಂಬಗಳನ್ನು ಪ್ರತ್ಯೇಕಿಸಿ ಮಕ್ಕಳ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಿರುವುದು ಹಿಂದಿನ ಆಡಳಿತದ ನೈತಿಕ ವೈಫಲ್ಯವಾಗಿದ್ದು, ರಾಷ್ಟ್ರೀಯ ಅವಮಾನವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೈ ಬೈಡನ್ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಯುತ, ಕ್ರಮಬದ್ಧ ಹಾಗೂ ಮಾನವೀಯ ವಲಸೆ ನೀತಿ ಹೊಂದಿದಾಗ ಅಮೆರಿಕವು ಹೆಚ್ಚು ಸುರಕ್ಷಿತ, ಶಕ್ತಿಯುತ ಹಾಗೂ ಸಮೃದ್ಧವಾಗಲಿದೆ ಎಂದವರು ತಿಳಿಸಿದರು.

ಟ್ರಂಪ್ ಆಡಳಿತವು ಉಂಟು ಮಾಡಿರುವ ಕೆಟ್ಟ ಹಾನಿಯನ್ನು ಪರಿಹರಿಸಲು ಬೈಡನ್ ಆಡಳಿತವು ಬದ್ಧವಾಗಿದೆ ಎಂದು ಅವರ ಆಡಳಿತವು ಸ್ಪಷ್ಟಪಡಿಸಿದೆ.

ಜೋ ಬೈಡನ್ ಕಾರ್ಯಕಾರಿ ಆದೇಶದಲ್ಲಿ ಟ್ರಂಪ್ ಆಡಳಿತದ ವಲಸೆ ನೀತಿಗಳನ್ನು ಸಂಪೂರ್ಣವಾಗಿ ಪುನರ್ ಪರಿಶೀಲಿಸುವಂತೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT