ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀಸಾಗೆ ಕಾಯುವ ಅವಧಿ ಕಡಿತಕ್ಕೆ ಅಮೆರಿಕ ಶ್ರಮ‘

Last Updated 18 ಜನವರಿ 2023, 15:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿ ವೀಸಾಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಮೆರಿಕದ ವೀಸಾ ಸೇವೆಗಳ ಉಪ ಸಹಾಯಕ ಕಾರ್ಯದರ್ಶಿ ಜೂಲಿ ಸ್ಟುಫಟ್‌ ತಿಳಿಸಿದ್ದಾರೆ.

‘ಭಾರತದಲ್ಲಿರುವ ನಮ್ಮ ಕಾನ್ಸುಲ್‌ ಕಚೇರಿಗಳು ಮತ್ತು ರಾಜತಾಂತ್ರಿಕ ಕಚೇರಿಗಳಲ್ಲಿನ ಸಿಬ್ಬಂದಿಗೆ ನೆರವಾಗಲು ಕಾನ್ಸುಲರ್‌ ಅಧಿಕಾರಿಗಳ ತಂಡವನ್ನು ನಾವು ಕಳುಹಿಸುತ್ತಿದ್ದೇವೆ. ಅವರು ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ವಾರಾಂತ್ಯದಲ್ಲೂ ಕೆಲಸ ಮಾಡಲಿದ್ದಾರೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ವಿಧಿಸಲಾಗಿರುವ ಪ್ರಯಾಣ ನಿರ್ಬಂಧದ ನಂತರ ಭಾರತ ಸೇರಿದಂತೆ ಕೆಲವು ದೇಶಗಳ ಪ್ರಜೆಗಳು ಅಮೆರಿಕ ವೀಸಾ ಪಡೆಯಲು ಹೆಚ್ಚಿನ ಶ್ರಮ ವಹಿಸಬೇಕಿದೆ. ವಿಶೇಷವಾಗಿ ಬಿ1(ವ್ಯಾಪಾರ) ಮತ್ತು ಬಿ2 (ಪ್ರವಾಸಿಗರು) ವಿಭಾಗದಲ್ಲಿ ದೀರ್ಘ ಕಾಲ ಕಾಯಬೇಕಾಗಿದೆ. ಮೊದಲ ಬಾರಿ ಈ ವಿಭಾಗದಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದವರು 3ವರ್ಷಗಳವರೆಗೆ ಕಾಯಬೇಕಾದ ಸ್ಥಿತಿಯೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT