ಗುರುವಾರ , ಆಗಸ್ಟ್ 11, 2022
21 °C

ಅಫ್ಗನ್‌ ಪ್ರಾಥಮಿಕ ಒಪ್ಪಂದ ಶಾಂತಿಮಾತುಕತೆಯ ಪ್ರಮುಖ ಮೈಲಿಗಲ್ಲು: ಮೈಕ್‌ ಪಾಂಪಿಯೊ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಫ್ಗಾನಿಸ್ತಾನ ಸರ್ಕಾರ ಮತ್ತು ತಾಲಿಬಾನ್‌ ಸಂಘಟನೆ ನಡುವಿನ ಶಾಂತಿ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿದ್ದು, ಇದನ್ನು ಅಮೆರಿಕವು ಸ್ವಾಗತಿಸಿದೆ. ಅಲ್ಲದೆ ಇದನ್ನು ಪ್ರಮುಖ ಮೈಲುಗಲ್ಲು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ವರ್ಣಿಸಿದ್ದಾರೆ.

‘ನಾವು ಶಾಂತಿ ಮಾತುಕತೆ ನಡೆಸಲು ಪ್ರಾಥಮಿಕ ಒಪ್ಪಂದಕ್ಕೆ ಬಂದಿದ್ದೇವೆ’ ಎಂದು ಅಫ್ಗಾನಿಸ್ತಾನ ಸರ್ಕಾರ ಮತ್ತು ತಾಲಿಬಾನ್‌ ಪ್ರತಿನಿಧಿಗಳು ತಿಳಿಸಿದ್ದಾರೆ. ಇದು 19 ವರ್ಷಗಳ ಯುದ್ಧದಲ್ಲಿ ಅವರ ಮೊದಲ ಲಿಖಿತ ಒಪ್ಪಂದವಾಗಿದೆ.

ದೋಹಾದಲ್ಲಿ ಅಫ್ಗನ್‌  ಶಾಂತಿ ಮಾತುಕತೆ ನಡೆದ ಕೆಲವು ತಿಂಗಳ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಇದು ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಕಲ್ಪಿಸಿದೆ. ಈ ಒಪ್ಪಂದವು 2020 ಸೆಪ್ಟೆಂಬರ್‌ 12ರ ಶಾಂತಿ ಮಾತುಕತೆಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಪಾಂಪಿಯೊ ಅವರು ತಿಳಿಸಿದರು.

ಈ ಒಪ್ಪಂದವು ಹಲವು ನಿಯಮ ಮತ್ತು ಕಾರ್ಯವಿಧಾನಗಳಿಂದ ಕ್ರೋಡಿಕೃತಗೊಂಡಿದೆ. ಉಭಯ ಬಣಗಳು ಜತೆಯಾಗಿ ಕೈಗೊಂಡಿರುವ ಪ್ರಮುಖ ನಿರ್ಧಾರಗಳು ರಾಜಕೀಯ ಮತ್ತು ಕದನ ವಿರಾಮ ಕುರಿತಾಗಿ ಮಾರ್ಗದರ್ಶನ ನೀಡಲಿವೆ. ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ಎರಡು ಬಣಗಳ ಇಚ್ಛೆಯನ್ನು ನಾನು ಅಭಿನಂದಿಸುತ್ತೇನೆ. ಎರಡು ಬಣಗಳು ಭಿನ್ನಭಿಪ್ರಾಯ ಮತ್ತು ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು