ಶನಿವಾರ, ಸೆಪ್ಟೆಂಬರ್ 26, 2020
22 °C

ಜೋ ಬಿಡೆನ್ ಅಧ್ಯಕ್ಷರಾಗಿ ಆಯ್ಕೆಯಾದರೆ ಅಮೆರಿಕ ನಗೆಪಾಟಲು: ಡೊನಾಲ್ಡ್ ಟ್ರಂಪ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ‘ಜೋ ಬಿಡೆನ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ ದೇಶದ ವರ್ಚಸ್ಸು ಕುಸಿಯಲಿದ್ದು, ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗಲಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಬಿಡೆನ್ ಅವರು ಪ್ರಸ್ತಾಪಿಸಿರುವ ನೀತಿ, ಚಿಂತನೆಗಳಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಟ್ರಂಪ್ ಗುರುವಾರ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜೋ ಬಿಡೆನ್ ಅವರು ಅಧ್ಯಕ್ಷರಾದರೆ ಜಗತ್ತು ನಗಲಿದೆ. ಇದರ ಪೂರ್ಣ ಲಾಭ ಪಡೆಯಲಿದೆ. ನಮ್ಮ ದೇಶ ಕುಸಿಯಲಿದೆ’ ಎಂದು ಅವರು ಟ್ವೀಟ್‌ನಲ್ಲಿ ಎಚ್ಚರಿಸಿದ್ದಾರೆ. ಇದರೊಂದಿಗೆ ಅವರು ಫಾಕ್ಸ್ ನ್ಯೂಸ್ ದೃಶ್ಯವನ್ನೂ ಹಂಚಿಕೊಂಡಿದ್ದಾರೆ.

ಬಿಡೆನ್ ಅವರು ಇಂದು ಕೋವಿಡ್ ಬಿಕ್ಕಟ್ಟಿನ ಸ್ಥಿತಿಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಈ ಮೂಲಕ ಅಮೆರಿಕದ ಜನರಿಗೆ ಅಗೌರವ ತೋರಿದ್ದಾರೆ. ಕೊರೊನಾ ಕುರಿತಂತೆ ಪ್ರತಿ ಹಂತದಲ್ಲಿ ಬಿಡೆನ್ ಚಿಂತನೆ ತಪ್ಪಾಗಿದೆ. ವೈಜ್ಞಾನಿಕ ಸಾಕ್ಷ್ಯಗಳನ್ನು ಅಲಕ್ಷ್ಯಿಸಿದ್ದಾರೆ. ವಾಸ್ತವದ ಎದುರು ಎಡಪಂಥೀಯ ಚಿಂತನೆಗಳನ್ನು ಹರಿಬಿಟ್ಟಿದ್ದಾರೆ ಎಂದು ಟೀಕಿಸಿದರು.

ಬಿಡೆನ್ ಅವರು ಅಮೆರಿಕದ ವಾಯುಗಡಿಯನ್ನು ಮುಕ್ತಗೊಳಿಸುವ ಚಿಂತನೆ ಹೊಂದಿದ್ದಾರೆ. ಈ ಮೂಲಕ ಕೊರೊನಾ ಸೋಂಕು ಅಮೆರಿಕದ ಪ್ರತಿಯೊಂದು ಸಮುದಾಯವನ್ನು ಆವರಿಸಲಿದೆ. ಗಡಿಯನ್ನು ಮುಕ್ತಗೊಳಿಸುವುದರಿಂದ ದೇಶ ರಕ್ಷಿಸಲಾಗದು. ಇದನ್ನು ನಾನು ಆರಂಭದಿಂದಲೂ ಹೇಳುತ್ತಿದ್ದೇನೆ. ಆದರೆ, ಡೆಮಾಕ್ರಾಟಿಕ್‌ ಪಕ್ಷ ಗಡಿಯನ್ನು ಮುಕ್ತಗೊಳಿಸಲು ಬಯಸುತ್ತಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು