ಶುಕ್ರವಾರ, ಡಿಸೆಂಬರ್ 3, 2021
26 °C

ಲಸಿಕೆ ಉತ್ಪಾದನೆಗೆ ಭಾರತದ ಜೊತೆ ಅಮೆರಿಕ ಸಹಯೋಗ: ಡಿಎಫ್‌ಸಿ ಮುಖ್ಯಸ್ಥ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಭಾರತವು ‘ಲಸಿಕೆ ಉತ್ಪಾದಕ ಶಕ್ತಿ ಕೇಂದ್ರವಾಗಿದ್ದು, ಜನರ ಜೀವ ಉಳಿಸಲು ಲಸಿಕೆ ಉತ್ಪಾದನೆಗೆ ಅಮೆರಿಕವು ಭಾರತದ ಜೊತೆಗೂಡಿ ಕಾರ್ಯನಿರ್ವಹಿಸಲಿದೆ‘ ಎಂದು ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ಮಂಡಳಿಯ (ಡಿಎಫ್‌ಸಿ) ಮುಖ್ಯಸ್ಥ ಡೇವಿಡ್ ಮಾರ್ಚಿಕ್‌ ಹೇಳಿದ್ದಾರೆ.

ಭಾನುವಾರದಿಂದ (ಅ.24) ಮೂರು ದಿನ ಭಾರತ ಪ್ರವಾಸ ಕೈಗೊಳ್ಳುವ ಉನ್ನತಾಧಿಕಾರ ನಿಯೋಗದ ನೇತೃತ್ವ ವಹಿಸಿರುವ ಅವರು, ಲಸಿಕೆ ಉತ್ಪಾದನೆ ಕುರಿತಂತೆ ಪ್ರವಾಸ ಪೂರ್ವದಲ್ಲಿ ಮಾತನಾಡಿದರು.

ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ಮಂಡಳಿಯು (ಡಿಎಫ್‌ಸಿ), ವಿಶ್ವದಾದ್ಯಂತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುತ್ತಿದೆ.

ಹೂಡಿಕೆಗೆ ಸಂಬಂಧಿಸಿ ಭಾರತವು ಡಿಎಫ್‌ಸಿಯ ಪ್ರಮುಖ ಹಾಗೂ ಮಹತ್ವದ ಪಾಲುದಾರ ರಾಷ್ಟ್ರವಾಗಿದೆ. ಮಂಡಳಿಯು ಭಾರತದಲ್ಲಿ ₹1,724.85 ಕೋಟಿ (2.3 ಬಿಲಿಯನ್ ಡಾಲರ್‌) ಹೂಡಿಕೆ ಮಾಡಿದೆ. ಒಟ್ಟಾರೆ ಡಿಎಫ್‌ಸಿಯ ಒಟ್ಟು ಹೂಡಿಕೆಯ ಶೇ 8ರಷ್ಟಾಗಿದೆ ಎಂದು ಮಾರ್ಚಿಕ್ ವಿವರಿಸಿದರು.

‘ಅಮೆರಿಕ ಮತ್ತು ಭಾರತ ಸಹಭಾಗಿತ್ವವನ್ನು ಬಲಪಡಿಸಲು ಹಾಗೂ ಆರ್ಥಿಕಾಭಿವೃದ್ಧಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ನಾವು ಉತ್ಸುಕರಾಗಿದ್ದೇವೆ‘ ಎಂದು ಮಾರ್ಚಿಕ್ ಇತ್ತೀಚೆಗೆ ಹೇಳಿದ್ದರು.

ಡಿಎಫ್‌ಸಿ ನಿಯೋಗವು ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಅಲ್ಲಿಂದ ಭಾರತಕ್ಕೆ ಪ್ರಯಾಣಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು