ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ, ಪಠಾಣ್‌ಕೋಟ್‌ ಮೇಲೆ ದಾಳಿ, ಸಂತ್ರಸ್ತರಿಗೆ ಸಿಗದ ನ್ಯಾಯ: ಭಾರತ ವಿಷಾದ

Last Updated 10 ಫೆಬ್ರುವರಿ 2022, 14:28 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ ನಿರಂತರವಾಗಿ ಎದುರಿಸುತ್ತಿದೆ. ಪಾಕಿಸ್ತಾನದ ಮೂಲದ ಭಯೋತ್ಪಾದಕರು ನಡೆಸಿದ 2008ರ ಮುಂಬೈ ಹಾಗೂ 2016ರ ಪಠಾಣ್‌ ಕೋಟ್‌ ದಾಳಿಯಿಂದ ಅಪಾರ ಸಾವು–ನೋವು ಉಂಟಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗುರುವಾರ ಭಾರತ ವಿಷಾದಿಸಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ, ಪ್ರಪಂಚದ ಯಾವುದೇ ಒಂದು ಭಾಗದಲ್ಲಿ ನಡೆಯುವ ಭಯೋತ್ಪಾದನೆ ಇಡೀ ಜಗತ್ತಿಗೆ ಅಪಾಯ ಉಂಟು ಮಾಡುತ್ತಿದೆ ಎಂದು ಭಾರತ ನಂಬಿದೆ. ಇವೆರಡು ದುರ್ಘಟನೆಯಲ್ಲಿ ಮಡಿದ ಜನರ ಜೀವದ ಬೆಲೆ ಅರಿತಿದ್ದೇವೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಭಾರತ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ ಎಂದರು.

ಭಯೋತ್ಪಾದಕರು ಡಿಜಿಟಲ್‌ ‍ಹಣ ವರ್ಗಾವಣೆ, ಕ್ರಿಫ್ಟೋಕರೆನ್ಸಿ ಹಾಗೂ ಬೆಳೆಯುತ್ತಿರುವ ಎಲ್ಲಾ ವಿಧದ ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದಾರೆ. ಕ್ರೌಡ್‌ಫಂಡಿಂಗ್‌ ಮೂಲಕ ಡ್ರೋಣ್‌ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಮತ್ತು ಜೈಶೆ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಗಳು 2008ರಲ್ಲಿ ಮುಂಬೈ ಮೇಲೆ ಹಾಗೂ 2016ರಲ್ಲಿ ಪಠಾಣ್‌ ಕೋಟ್‌ ಮೇಲೆ ದಾಳಿ ನಡೆಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT