ನವದೆಹಲಿ: ಅಮೆರಿಕ ಪಡೆ ಕಾಬೂಲ್‌ನಿಂದ ತೆರಳುತ್ತಿದ್ದಂತೆ ತಾಲಿಬಾನ್‌ಗಳ ಅಟ್ಟಹಾಸ ಮೇರೆ ಮೀರಿದೆ. ಅಮೆರಿಕ ಮಿಲಿಟರಿ ಹೆಲಿಕಾಪ್ಟರ್‌ನಿಂದ ನೇಣು ಬಿಗಿದ ಮೃತದೇಹವನ್ನು ಅಫ್ಗಾನಿಸ್ತಾನದ ಕಂದಹಾರ್‌ನಲ್ಲಿ ತಾಲಿಬಾನ್‌ಗಳು ಹಾರಿಸುತ್ತಿದ್ದಾರೆ ಎನ್ನಲಾದ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮಂಗಳವಾರ ಹಲವಾರು ಪತ್ರಕರ್ತರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಅಫ್ಗಾನಿಸ್ತಾನದಿಂದ ಮಧ್ಯರಾತ್ರಿಯ ವೇಳೆಗೆ ಅಮೆರಿಕದ ಯೋಧರನ್ನೊಳಗೊಂಡ ಕೊನೆಯ ವಿಮಾನ ಟೇಕಾಫ್ ಆದ ಬಳಿಕ ತಾಲಿಬಾನಿಗಳು ಈ ವರ್ತನೆ ತೋರಿದ್ದಾರೆ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇಸ್ಲಾಮಿಕ್ ಎಮಿರೇಟ್ ಆಫ್ಘಾನಿಸ್ತಾನದ ಆಂಗ್ಲ ಭಾಷೆಯ ಅಧಿಕೃತ ಟ್ವಿಟರ್ ಖಾತೆ ಎಂದು ಹೇಳಲಾದ ‘ತಾಲಿಬ್ ಟೈಮ್ಸ್’ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಮೆರಿಕದ ತಾಲಿಬಾನ್ ವಶದಲ್ಲಿರುವ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ನೇಣು ಹಾಕಿದ ಮೃತದೇಹ ತೇಲಾಡುತ್ತಿರುವ ದೃಶ್ಯವಿರುವ ವಿಡಿಯೊ ಹಂಚಿಕೊಳ್ಳಲಾಗಿದೆ.

‘ಈ ಸಮಯದಲ್ಲಿ, ಇಸ್ಲಾಮಿಕ್ ಎಮಿರೇಟ್‌ನ ವಾಯುಪಡೆಯ ಹೆಲಿಕಾಪ್ಟರ್‌ಗಳು ಕಂದಹಾರ್ ನಗರದ ಮೇಲೆ ಹಾರುತ್ತಿವೆ ಮತ್ತು ನಗರದಲ್ಲಿ ಗಸ್ತು ತಿರುಗುತ್ತಿವೆ’ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.