ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ವಿಯಟ್ನಾಂನಲ್ಲಿ ಭಾರತ–ಬ್ರಿಟನ್‌ ಮಿಶ್ರಣದ ಹೊಸ ರೂಪಾಂತರ ಪತ್ತೆ

Last Updated 29 ಮೇ 2021, 7:23 IST
ಅಕ್ಷರ ಗಾತ್ರ

ಹನೊಯಿ: ಕೊರೊನಾ ವೈರಸ್‌ನ ಹೊಸ ರೂಪಾಂತರವನ್ನು ವಿಯಟ್ನಾಂ ಪತ್ತೆ ಹಚ್ಚಿದೆ.

ಇದು ಭಾರತ ಮತ್ತು ಬ್ರಿಟನ್‌ನ ಕೋವಿಡ್‌–19 ರೂಪಾಂತರದ ಮಿಶ್ರಣವಾಗಿದ್ದು, ಗಾಳಿಯಲ್ಲಿ ವೇಗವಾಗಿ ಹರಡುತ್ತದೆ ಎಂದು ಆರೋಗ್ಯ ಸಚಿವ ಎನ್‌ಗುಯೆನ್‌ ಥಾನ್ಹ ಲಾಂಗ್‌ ಶನಿವಾರ ತಿಳಿಸಿದ್ದಾರೆ.

’ಹೊಸದಾಗಿ ಗುರುತಿಸಲಾದ ಕೋವಿಡ್‌ ರೋಗಿಗಗಳ ಆನುವಂಶಿಕ ಅನುಕ್ರಮದ ಪರೀಕ್ಷೆ ನಡೆಸಿದಾಗ ಭಾರತ ಮತ್ತು ಇಂಗ್ಲೆಂಡ್‌ನ ಕೋವಿಡ್‌ ರೂಪಾಂತರದ ಮಿಶ್ರಣ ಪತ್ತೆಯಾಗಿದೆ‘ ಎಂದು ಎನ್‌ಗುಯೆನ್‌ ತಿಳಿಸಿದ್ದಾರೆ.

’ಇದು ನಿರ್ದಿಷ್ಟವಾಗಿ ಭಾರತೀಯ ರೂಪಾಂತರವಾಗಿದ್ದರೂ ಮೂಲದಲ್ಲಿ ಇಂಗ್ಲೆಂಡ್‌ ರೂಪಾಂತರದ ಲಕ್ಷಣಗಳು ಹೊಂದಿದೆ‘ ಎಂದು ಎನ್‌ಗುಯೆನ್‌ ಹೇಳಿರುವುದಾಗಿ ಆನ್‌ಲೈನ್‌ ಪತ್ರಿಕೆ ವಿಎನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ವಿಯಟ್ನಾಂ ಕಳೆದ ವರ್ಷ ಬಹುತೇಕ ಯಶಸ್ವಿಯಾಗಿ ಕೋವಿಡ್‌ ನಿಯಂತ್ರಿಸಿತ್ತು. ಆದರೆ, ಈ ವರ್ಷ ವೇಗವಾಗಿ ಹರಡುತ್ತಿರುವ ಕೋವಿಡ್‌ ವಿರುದ್ಧ ಹೋರಾಟ ನಡೆಸುತ್ತಿದೆ. ಏಪ್ರಿಲ್‌ ತಿಂಗಳಲ್ಲಿ 31ನಗರಗಳಲ್ಲಿ ಸುಮಾರು 3,600 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT