ವಾಷಿಂಗ್ಟನ್: ಅಮೆರಿಕದ ಗ್ರೀನ್ ಕಾರ್ಡ್ (ಶಾಶ್ವತ ನಿವಾಸಿ ಪತ್ರ) ನೀಡಲು ದೇಶ ಆಧಾರಿತ ಕೋಟಾ ನಿಯಮವನ್ನು ಕೈಬಿಡುವ ಪ್ರಸ್ತಾವ ಹೊಂದಿರುವ ಮಸೂದೆ ಜಾರಿ ಮಾಡಲು ಅಮೆರಿಕ ಸಂಸತ್ತಿಗೆ ಶ್ವೇತಭವನವು ಬೆಂಬಲ ಸೂಚಿಸಿದೆ. ಅಮೆರಿಕದ ಉದ್ಯೋಗದಾತರು ಉದ್ಯೋಗಿ ಆಯ್ಕೆ ವೇಳೆ ಅವರ ಹುಟ್ಟಿದ ಸ್ಥಳದ ಹೊರತಾಗಿ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ನಿಯಮ ರೂಪಿಸಲಾಗಿದೆ.

ಇದು ಜಾರಿಯಾದರೆ ಸಾವಿರಾರು ಭಾರತೀಯ ವಲಸಿಗರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.ಶಾಸನಬದ್ಧ ಉದ್ಯೋಗಕ್ಕಾಗಿ ಗ್ರೀನ್ ಕಾರ್ಡ್ ಪಡೆಯಲು ಸಮಾನ ಅವಕಾಶ (ಇಎಜಿಎಲ್‌ಇ) ಕಾಯ್ದೆ– 2022ರ ಪರ ಮತ ನೀಡಲು ಅಮೆರಿಕ ಸಂಸತ್ತು ನಿರ್ಧರಿಸಿದೆ.ವಲಸಿಗರ ವೀಸಾ ವ್ಯವಸ್ಥೆಯನ್ನು ಉನ್ನತೀಕರಿಸಲು ಮತ್ತು ವಲಸಿಗರ ವೀಸಾ ಬಾಕಿ ಉಳಿಸುವುದರಿಂದ ಆಗುವ ವ್ಯಕ್ತಿರಿಕ್ತ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಪ್ರಯತ್ನಕ್ಕೆ ಆಡಳಿತವು ಬೆಂಬಲ ನೀಡಲಿದೆ ಎಂದು ಶ್ವೇತಭವನ ತಿಳಿಸಿದೆ.

ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳು ವೀಸಾ ಪಡೆಯುವುದರಿಂದ ಹಿಂದೆ ಬೀಳಬಾರದು ಎಂಬ ಉದ್ದೇಶದಿಂದ ಈ ಬದಲಾವಣೆಯನ್ನು 9 ವರ್ಷಗಳ ಕಾಲ ಮುಂದುವರಿಸಲಾಗುವುದು. ಕಾನೂನು ತೊಡಕಿನ ಕಾರಣ ಇನ್ನೂ ಗ್ರೀನ್ ಕಾರ್ಡ್ ಪಡೆಯದ ಸಾವಿರಾರು ಭಾರತೀಯ ವಲಸಿಗರಿಗೆ ಈ ಮಸೂದೆಯಿಂದ ಭಾರಿ ಅನುಕೂಲವಾಗಲಿದೆ ಎಂದು ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಮಖೀಜಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.