ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ರಶ್ದಿ ಮೇಲೆ ದಾಳಿ ಮಾಡಿದವನು ಯಾರು? ಕುತೂಹಲಕರ ವಿಷಯಗಳು ಬಹಿರಂಗ..

Last Updated 13 ಆಗಸ್ಟ್ 2022, 9:45 IST
ಅಕ್ಷರ ಗಾತ್ರ

ನ್ಯೂರ್ಯಾಕ್‌: ಭಾರತೀಯ ಮೂಲದ ಲೇಖಕಸಲ್ಮಾನ್ ರಶ್ದಿ ಅವರನ್ನು ಚಾಕುವಿನಿಂದ ಇರಿದಿದ್ದ ಹದಿ ಮತರ್‌ ಎಂಬಾತನನ್ನುಅಮೆರಿಕಪೊಲೀಸರು ಬಂಧಿಸಿದ್ದಾರೆ.

ಹದಿ ಮತರ್‌ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಿ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

* ಇವನು ಮ್ಯಾನ್‌ಹಟ್ಸನ್‌ನಲ್ಲಿರುವ ಫೇರ್‌ವ್ಯೂ ನಿವಾಸಿಯಾಗಿದ್ದಾನೆ.

* ‘ಶಿಯಾ ಉಗ್ರವಾದ‘ ಹಾಗೂ ಇರಾನ್‌ ಇಸ್ಲಾಮಿಕ್‌ ರೆವಲ್ಯೂಷನ್‌ ಗಾರ್ಡ್ (ಐಆರ್‌ಜಿಸಿ) ಬಗ್ಗೆ ಸಹಾನುಭೂತಿ ಹೊಂದಿದ್ದಾನೆ ಎಂದು ಪೊಲೀಸರುಹೇಳಿದ್ದಾರೆ.

* 2020ರಲ್ಲಿಹತ್ಯೆಗೀಡಾದ ಇರಾನ್ ಕಮಾಂಡರ್ ಖಾಸಿಂ ಸೊಲೊಮನಿಫೋಟೊಗಳನ್ನು ತನ್ನ ಸ್ಮಾರ್ಟ್‌ಫೋನ್‌ನಲ್ಲಿಇಟ್ಟುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

* ಹದಿ ಮತರ್‌ ಒಬ್ಬನೇ ಈ ಕೆಲಸ ಮಾಡಿದ್ದಾನೆ ಎಂದಿರುವ ಪೊಲೀಸರು,ಘಟನೆ ಸ್ಥಳದಿಂದ ಒಂದು ಬ್ಯಾಗ್‌, ಕೆಲವು ವಿದ್ಯುನ್ಮಾನಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ.

* ಇವನ ಬಗ್ಗೆ ಕ್ರಿಮಿನಲ್‌ ಪ್ರಕರಣಗಳು? ಅವನ ಮೂಲ ದೇಶ? ವೃತ್ತಿ ಯಾವುದು? ಹಿನ್ನೆಲೆ ಏನುಎಂಬುದರ ಬಗ್ಗೆಪೊಲೀಸರು ತಪಾಸಣೆ ಮಾಡುತ್ತಿದ್ದಾರೆ.

*ಷಟೌಕ್ವಾ ಇನ್‌ಸ್ಟಿಟ್ಯೂಟ್‌ನ ವೇದಿಕೆ ಮೇಲೆ ರಶ್ದಿ ಭಾಷಣ ಪ್ರಾರಂಭ ಮಾಡುತ್ತಿದ್ದಂತೆ ಹದಿ ಮತರ್‌ ಚಾಕುವಿನಿಂದ ರಶ್ದಿ ಮೇಲೆ ದಾಳಿ ಮಾಡಿದ್ದ. ಸಿಸಿ ಕ್ಯಾಮೆರಾ ಹಾಗೂ ಸ್ಥಳೀಯರ ಸಹಾಯದಿಂದ ಪೊಲೀಸರು ಅವನನ್ನು ಬಂಧಿಸಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT