ಮಂಗಳವಾರ, ನವೆಂಬರ್ 5, 2019

ಇಂದು ಜನಿಸಿದವರ ದಿನ ಭವಿಷ್ಯ:ಈ ದಿನ ಅತ್ಯಂತ ಶುಭ ದಿನವಾಗಿದೆ. ಈ ದಿನ ಜನ್ಮವಾದವರಿಗೆ ಮಾನಸಿಕ ಸಂತೋಷವು ಸದಾ ನೆಲೆಸಿರುವುದು. ನಿರಾಯಾಸವಾಗಿ ಕೆಲಸಗಳನ್ನು ಚಮತ್ಕಾರವೆಂಬಂತೆ ನಿಭಾಯಿಸಲಿದ್ದೀರಿ.

ಸಾಂಸಾರಿಕ ಜೀವನದಲ್ಲಿ ಉತ್ತಮ ಪ್ರತಿಕ್ರಿಯೆ. ವಿದ್ಯಾರ್ಥಿಗಳಿಗೆ ಮಾನಸಿಕ ಗೊಂದಲ ಸಾಧ್ಯತೆ. ಉಬ್ಬಸ ಮುಂತಾದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರ್ಥಿಕರಂಗದಲ್ಲಿ ಶ್ರಮ ವಹಿಸಿದಷ್ಟೂ ಫಲ ಇರುವುದರಿಂದ ಶ್ರಮಜೀವಿಯಾದ ನಿಮಗೆ ಯಶಸ್ಸು ಲಭಿಸಲಿದೆ. ಆರೋಗ್ಯದಲ್ಲಿ ನಿರ್ಲಕ್ಷ್ಯ ತೋರದಿರಿ. ಆತುರತೆಯ ನಿರ್ಧಾರ ಸಲ್ಲದು. ದೇವಿಯ ಆರಾಧನೆಯಿಂದ ಎಲ್ಲ ಕಾರ್ಯಗಳಲ್ಲಿ ಯಶಸ್ಸು.

ಮೇಷ:ಅನಿರೀಕ್ಷಿತ ಧನಾಗಮನದ ಸಾಧ್ಯತೆ ಕಂಡುಬರುತ್ತಿದೆ. ಮಕ್ಕಳಿಂದ ಶುಭ ಸಮಾಚಾರ ಕೇಳಲಿದ್ದೀರಿ. ಉತ್ತಮ ಆರೋಗ್ಯವನ್ನು ಹೊಂದಿರುವಿರಿ. ಮಾನಸಿಕ ನೆಮ್ಮದಿಯು ನಿಮ್ಮದಾಗಲಿದೆ.

ವೃಷಭ:ಕೆಲಸದಲ್ಲಿ ಗೌರವ, ಮನ್ನಣೆ ಹೊಂದಲಿದ್ದೀರಿ. ನಿಂತುಹೋಗಿರುವ ಯೋಜನೆಗಳು ಪುನಃ ಚಾಲನೆ ಪಡೆದುಕೊಳ್ಳಲಿವೆ. ಆಪ್ತರೊಬ್ಬರ ಭೇಟಿ ಸಾಧ್ಯತೆ ಕಂಡುಬರುವುದು. ಸಂತಸದ ವಾತಾವರಣ ನೆಲೆಸಲಿದೆ.

ಮಿಥುನ:ನೆನೆದ ಕಾರ್ಯಗಳು ಸಿದ್ಧಿಯಾಗುವ ದಿನ. ಸಹೋದರರಿಗೆ ಅಪಘಾತದ ಬಗ್ಗೆ ಎಚ್ಚರಿಕೆ ಅಗತ್ಯ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ದೊರಕಲಿದೆ. ದೇವತಾರಾಧನೆಯಿಂದ ಸ್ವಾಭಿಮಾನ ಕಾಪಾಡಿಕೊಳ್ಳಬಹುದು.

ಕರ್ಕಾಟಕ:ಅಪವಾದದಿಂದ ಪಾರಾಗಲಿದ್ದೀರಿ. ಪ್ರಯಾಣವು ಶುಭಕರವಾಗಿ ಪರಿಣಮಿಸಲಿದೆ. ಮಕ್ಕಳ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಅಗತ್ಯ. ರ‍್ಥಿಕ ಸ್ಥಿತಿ ಎಂದಿನಂತೆ ಮುಂದುವರಿಯಲಿದೆ. ದೇಹಾಲಸ್ಯದಿಂದ ಕೆಲಸಗಳಲ್ಲಿ ನಿರುತ್ಸಾಹ.

ಸಿಂಹ:ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದಾದರೂ ವಿಷ ಜಂತುಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಒಳಿತು. ವಿನಾಕಾರಣ ಅಧಿಕ ಖರ್ಚು ಸಂಭವಿಸುವ ಸಾಧ್ಯತೆ ಕಂಡುಬರುವುದು. ವ್ಯಯದ ಮೇಲೆ ಹಿಡಿತವಿರಲಿ.

ಕನ್ಯಾ:ಕೆಲಸದಲ್ಲಿ ಕಿರಿಕಿರಿಯುಂಟಾಗಲಿದೆ. ಯಾರಮೇಲೂ ಅತಿಯಾದ ನಂಬಿಕೆ ಸಲ್ಲದು. ಹಿರಿಯರ ಮಾರ್ಗದರ್ಶನದಿಂದ ಸಂಕಷ್ಟಗಳು ಪರಿಹಾರವಾಗಲಿವೆ. ಮನೆ ಮಂದಿಯೊಂದಿಗೆ ದೂರದ ಬಂಧುಗಳ ಭೇಟಿ ಸಾಧ್ಯತೆ.

ತುಲಾ:ಸಾಹಿತಿ, ಬರಹಗಾರರಿಗೆ ಶುಭದಾಯಕ ದಿನ. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಗೊಂದಲ ಉಂಟಾಗಬಹುದು. ಆಯ್ಕೆಯ ಮೂಲಕ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡಲ್ಲಿ ಸಫಲತೆ ಕಾಣುವಿರಿ.

ವೃಶ್ಚಿಕ:ಹೊಸ ಯೋಜನೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವೆಚ್ಚ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ.

ಧನು:ಕೋರ್ಟ್ ಕಚೇರಿಗೆ ಸಂಬಂಧಿಸಿದ ಕೆಲಸಗಳು ಯಶಸ್ವಿಯಾಗಲಿವೆ. ಅನಾರೋಗ್ಯ ಪೀಡಿತರು ಆರೋಗ್ಯದಲ್ಲಿ ಪ್ರಗತಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕ ವಾತಾವರಣ ಮೂಡಿಬರಲಿದೆ. ನೆಮ್ಮದಿ ಕಾಣುವಿರಿ.

ಮಕರ:ಪೊಲೀಸರಿಗೆ ಬಿಡುವಿಲ್ಲದ ಕೆಲಸ, ಉಪನ್ಯಾಸಕ ವೃತ್ತಿಯಲ್ಲಿರುವವರಿಗೆ ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ. ಉತ್ತಮ ಆರೋಗ್ಯ ಭಾಗ್ಯ. ನವವಿವಾಹಿತರಿಗೆ ಅತಿಯಾದ ಪ್ರವಾಸದಿಂದಾಗಿ ಆಯಾಸ.

ಕುಂಭ:ಮನೆಯ ನಿರ್ಮಾಣ ಹಾಗೂ ಇತರ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ವಾಹನ ಖರೀದಿಗಾಗಿ ಪ್ರಶಸ್ತ ದಿನವಾಗಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಬಿರುಕು ಅಥವಾ ತೊಂದರೆ ಸಾಧ್ಯತೆ.

ಮೀನ:ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬಂದರೂ ಸಹೋದ್ಯೋಗಿಗಳ ಸಹಕಾರದಿಂದ ನೆಮ್ಮದಿ. ಕಾರ್ಯಬಾಹುಳ್ಯದಿಂದ ಉದ್ವೇಗ ಸಾಧ್ಯತೆ. ಸಂಗಾತಿಯ ಸಾಂತ್ವನದ ಮಾತುಗಳಿಂದಾಗಿ ಸಮಾಧಾನ.

ಈ ದಿನ:ಶ್ರೀವಿಕಾರಿ ನಾಮ ಸಂವತ್ಸರ ದಕ್ಷಿಣಾಯನ ಶರದೃತು ಕಾರ್ತಿಕ ಮಾಸ ಶುಕ್ಲ ಪಕ್ಷ ಮಳೆ ನಕ್ಷತ್ರ ಸ್ವಾತಿ ನವಮೀ ಗಂ. 60–00 (ದಿನಪೂರ್ತಿ) ಮಂಗಳವಾರ ನಿತ್ಯ ನಕ್ಷತ್ರ ಧನಿಷ್ಠ ಗಂ. 60–00 (ದಿನಪೂರ್ತಿ) ಗಂಡ ನಾಮ ಯೋಗ ಗಂ 7.43 ಬಾಲವ ಕರಣ ಗಂ. 30–32 ವಿಷ ಗಂ. 8–0 ಅಮೃತ ಗಂ. 34–13 ರಾಹುಕಾಲ: ಮ. ಗಂ. 3–00 ರಿಂದ 4.30 ಗುಳಿಕ ಕಾಲ ಮ. ಗಂ 12 ರಿಂದ 1.30 ಯಮಗಂಡ ಕಾಲ ಬೆ. ಗಂ 9 ರಿಂದ 10–30 ಸೂರ್ಯೋದಯ: 6–17 ಸೂರ್ಯಾಸ್ತ: 5–49 ಅದೃಷ್ಟ ಸಂಖ್ಯೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.