ಮಲಘಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಅಳಲು

7

ಮಲಘಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಅಳಲು

Published:
Updated:
ಮಲಘಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಅಳಲು

ಕಾಳಗಿ: ಶಾಲಾ ಮಕ್ಕಳಿಗೆ ಮಧ್ಯಾಹ್ನ ನೀಡಲಾಗುವ ಬಿಸಿಯೂಟದಲ್ಲಿ ಕಳೆದ ಮೂರು ದಿನಗಳಿಂದ ಬಾಲಹುಳು ಮತ್ತು ಹರಳು ಬರುತ್ತಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ಮಲಘಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಏಳನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಮೊದಲೇ ಬೇಕಾಬಿಟ್ಟಿಗೆ ಹೆಸರಾದ `ಬಿಸಿಯೂಟ~ ದಲ್ಲಿ ಇದೀಗ ಬಾಲಹುಳು ಮತ್ತು ಹರಳು ಮಿಶ್ರಿತವಾಗುತ್ತಿರುವ ಸುದ್ದಿ ಕೇಳಿ ಬುಧವಾರ ಬಿಸಿಯೂಟದ ಪರಿಶೀಲನೆಗೆ ಆಗಮಿಸಿದ ಗುಂಡಗುರ್ತಿ ವಲಯದ ಶಿಕ್ಷಣ ಸಂಯೋಜಕ ವಿಜಯಕುಮಾರ ಕುದುರೆ ಅವರಿಗೆ `ವಿದ್ಯಾರ್ಥಿಗಳು ಏದುರಿಟ್ಟ ಗೋಳು~ ಇದಾಗಿದೆ.ಸಮಯಕ್ಕೆ ಸಿದ್ಧವಾಗದ ಬಿಸಿಯೂಟದ ಅಡುಗೆಯಲ್ಲಿ ಒಂದಿದ್ದರೆ ಒಂದಿರಲ್ಲ. ಅಂಥದರಲ್ಲಿ ಮೂರು ದಿನಗಳಿಂದಲೂ ಅನ್ನದಲ್ಲಿ ಸತ್ತ ಬಾಲಹುಳು, ಹರಳು ರಾಜಾರೋಷವಾಗಿವೆ. ಪ್ರತಿ ಮಗುವಿಗೆ ದಿನಕ್ಕೆ 60-70ಪೈಸೆ ತರಕಾರಿ ಉಪಯೋಗಿಸುವುದಿದ್ದರೆ ಇಲ್ಲಿ ಮಾತ್ರ ಬುಧವಾರ ಹಾಜರಿದ್ದ 114ಮಕ್ಕಳಿಗೆ ಕೇವಲ 15 ರೂಪಾಯಿ ತರಕಾರಿ ಬಳಸಲಾಗಿದೆ ಎಂದು ಸ್ವತಃ ಮುಖ್ಯ ಅಡುಗೆದಾರರೇ ಶಿಕ್ಷಣ ಸಂಯೋಜಕರ ಮುಂದೆ ಹೇಳಿದ್ದಾರೆ.ಅಡುಗೆದಾರರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರಲ್ಲ. ಬಂದಾಗಲೇ ಅಡುಗೆ ಮಾಡಿ ಸಮಯ ಸಾರಿಣಿ ಇಲ್ಲದೆ ಬಡಿಸಿ ಮನೆಗೆ ಮರಳುತ್ತಾರೆ. ಇದರಿಂದ ತರಗತಿಗಳಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.ಹೀಗೆ ಅವ್ಯವಸ್ಥೆಯ ಗೂಡಾಗಿರುವ ಇಲ್ಲಿನ `ಬಿಸಿಯೂಟ~ದ ಯೋಜನೆ ಮಕ್ಕಳಿಗೆ ಮಧ್ಯಾಹ್ನದ ಹಸಿವು ನೀಗಿಸಿ ಹೊಟ್ಟೆ ತುಂಬಿಸುವ ಬದಲು ರೋಗ ಸೃಷ್ಟಿಸಿ ಆರೋಗ್ಯ ಹದಗೆಡಿಸುವುದಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry