ಶುಕ್ರವಾರ, ಏಪ್ರಿಲ್ 16, 2021
21 °C

ಬಣ್ಣಬಣ್ಣದ ಮೀನು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಂಕಾರಿಕ ಮೀನಿಗಳ ಸಾಕಾಣಿಕೆ ಬಗ್ಗೆ ಅಭಿವೃದ್ಧಿ ದೇಶಗಳಲ್ಲಿ ಹೆಚ್ಚು ಪ್ರಚುರಪಡಿಸಲಾಗುತ್ತಿದೆ. ಈ ಮೀನು ಸಾಕಾಣಿಕೆಗೆ ಹೆಚ್ಚಿನ ಬಂಡವಾಳ ಬೇಕಾಗಿಲ್ಲ. ಮಹಿಳೆಯರು ತಮ್ಮ ಕೃಷಿ ಚಟುವಟಿಕೆಯ ನಡುವೆ ಉಪ ಕಸಬಿನಂತೆ ಬಿಡುವಿನ ಸಮಯದಲ್ಲಿ ಕೆಲಸ ಮಾಡಬಹುದು. ಮನೆಯಲ್ಲಿರುವ ವೃದ್ಧರು ಅಥವಾ ಮಕ್ಕಳು ಉಸ್ತುವಾರಿಯನ್ನು ನಿರ್ವಹಿಸುವಷ್ಟು ಇದು ಸುಲಭವಾಗಿದೆ.ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯವು ಆಧುನಿಕ ಕೃಷಿಯ ಆವಿಷ್ಕಾರಗಳನ್ನು ಜನತೆಗೆ ನೀಡುವ ನಿಟ್ಟಿನಲ್ಲಿ ವಿದ್ಯಾಲಯದ ಪಕ್ಕದಲ್ಲಿ ಹಸಿರಿನ ಹೊದಿಕೆಯನ್ನು ನಿರ್ಮಿಸಿ ತೊಟ್ಟಿಗಳಲ್ಲಿ ಆಲಂಕಾರಿಕ ಮೀನು ಸಾಕಾಣಿಕೆಯನ್ನು ನಡೆಸಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. “ಕಳೆದ ಡಿಸೆಂಬರ್‌ನಲ್ಲಿ ಇದು ಶುರುವಾಗಿದ್ದು, 9 ತಳಿಗಳ ಮೀನು ಇಲ್ಲಿವೆ. ಪ್ರತಿ ಮೀನಿಗೆ ಐದು ರೂಪಾಯಿ ಬೆಲೆ. ಆಸಕ್ತರು ಖರೀದಿಸಬಹುದು” ಎನ್ನುತ್ತಾರೆ ಅದರ ನಿರ್ವಹಣೆ ನೋಡಿಕೊಳ್ಳುತ್ತಿರುವ ಡಾ.ಎನ್.ಶಿವಶಂಕರ್.ಆಲಂಕಾರಿಕ ಮೀನು ಎರಡು ವಿಧದಲ್ಲಿವೆ. ಮೊಟ್ಟೆ ಇಡುವ ಹಾಗೂ ಮರಿ ಹಾಕುವ ಮೀನು. ಮೊಟ್ಟೆ ಇಡುವ ಮೀನುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅದರಲ್ಲಿ ಗೋಲ್ಡ್ ಫಿಶ್, ಏಂಜಿಲ್ ಫಿಶ್, ಸಯಾಮೀಸ್, ಫೈಟರ್, ಟೈಗರ್ ಮುಂತಾದ ತಳಿ ಹೆಚ್ಚು ಆಕರ್ಷಣೆಯಿಂದ ಕೂಡಿವೆ. 12ರಿಂದ 15 ದಿವಸದ ಮರಿಗಳನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಮಾರಾಟ ಮಾಡಲಾಗುತ್ತದೆ. ಅಲ್ಲಿ ಮೀನಿನ ಮರಿಗಳನ್ನು ಪಡೆಯಬಹುದಾಗಿದೆ.ತೊಟ್ಟಿ ನಿರ್ಮಾಣ: ಆಲಂಕಾರಿಕ ಮೀನುಗಳ ಸಾಕಾಣಿಕೆಗಾಗಿ ಅವಶ್ಯಕವಾದ ತೊಟ್ಟಿ ನಿರ್ಮಿಸಬೇಕು. ಅಂದರೆ 500 ಲೀಟರ್ ನೀರು ಸಂಗ್ರಹವಾಗುವ ತೊಟ್ಟಿ ಇರಬೇಕು. ತೆಂಗಿನ ಗರಿ ಇಲ್ಲವೇ ಇತರ ಬೇರೆ ಎಲೆಗಳಿಂದ ಚಪ್ಪರವನ್ನು ಶೇ 50ರಷ್ಟು ಸೂರ್ಯನ ಬೆಳಕು ತಡೆಯುವಂತೆ ಮಾಡಬೇಕು. ಮರಿಗಳನ್ನು ತೊಟ್ಟಿಗೆ ಬಿಡುವ ಮುಂಚೆ ನೀರು ತುಂಬಿಸಿ, ನಿಗದಿತ ಪ್ರಮಾಣದಲ್ಲಿ ಹಸಿ ಸೆಗಣಿ, ಕಡಲೆಹಿಂಡಿ, ಸೂಪರ್ ಫಾಸ್ಪೇಟ್ ದಿನ ಬಿಟ್ಟು ದಿನದ ಅವಧಿಯಲ್ಲಿ 60 ದಿನಗಳವರೆಗೆ ತಪ್ಪದೇ ಹಾಕಬೇಕು. ಉತ್ತಮ ಬೆಳವಣಿಗೆಗಾಗಿ ಉತ್ತಮ ಆಹಾರದ ಜೊತೆಗೆ ನೈಸರ್ಗಿಕ ಆಹಾರವನ್ನು ನೀಡಬೇಕು. ಕೃತಕವಾಗಿ ತಯಾರಿಸಿದ ಆಹಾರವನ್ನು ನಿಗದಿಪಡಿದ ಸಮಯಕ್ಕೆ ಹಾಕಬೇಕು ಎನ್ನುತ್ತಾರೆ, ಸಹ ಪ್ರಾಧ್ಯಾಪಕ ಡಾ.ಎನ್.ಶಿವಶಂಕರ್.ನೀರಿನ ಉಷ್ಣತೆಯು 26-28 ಡಿಗ್ರಿ ಸೆಲ್ಸಿಯಸ್ ಇರುವಂತೆ ನೋಡಿಕೊಳ್ಳಬೇಕು. ನೀರಿನಲ್ಲಿ ಕೆಸರು ಹೆಚ್ಚಾದರೆ ಮೀನಿನ ಕಿವಿರುಗಳಲ್ಲಿ ಅದು ಶೇಖರಣೆಯಾಗಿ ಅಪಾಯ ತಂದೊಡ್ಡಬಹುದು. ಉತ್ಪಾದಿಸಿದ ಮೀನುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಬಹುದು.ಆಲಂಕಾರಿಕ ಮೀನು ಉತ್ಪಾದನೆ ಮತ್ತು ಸಾಕಾಣಿಕೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಶೇಷ ಸಹಾಯಧವನ್ನು ಪಡೆಯಬಹುದಾಗಿದೆ. ವಿವರಗಳಿಗೆ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಎನ್.ಶಿವಶಂಕರ್ ಅವರನ್ನು (ಮೊ: 9481662252) ಸಂಪರ್ಕಿಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.