ಶುಕ್ರವಾರ, ಫೆಬ್ರವರಿ 26, 2021
20 °C

ಶಿವನ ಆರಾಧನೆಗೆ ನಗರ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವನ ಆರಾಧನೆಗೆ ನಗರ ಸಜ್ಜು

ಗುಲ್ಬರ್ಗ: ಮಹಾಶಿವರಾತ್ರಿ ನಿಮಿತ್ತ ಫೆ.27ರಂದು ನಗರದೆಲ್ಲೆಡೆ ಶಿವನ ಮಂದಿರಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಆಳಂದ ರಸ್ತೆಯಲ್ಲಿರುವ ರಾಮ­ತೀರ್ಥ ಮಂದಿರದಲ್ಲಿ ನಡೆಯುವ ಶಿವಪೂಜೆಯಲ್ಲಿ ಪ್ರತಿವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆಯುತ್ತಾರೆ.ಈಗಾಗಲೇ ಭಕ್ತರು ಕುಳಿತುಕೊಳ್ಳಲು ಹಾಗೂ ಪ್ರಸಾದ ಸೇವಿಸಲು ಸೂಕ್ತ ವ್ಯವಸ್ಥೆ ಮಾಡ­ಲಾಗಿದೆ. ಸೇಡಂ ರಸ್ತೆಯ ಗೀತಾ ನಗರದಲ್ಲಿ ಹೊಸದಾಗಿ ನಿರ್ಮಾಣ­ಗೊಂಡಿರುವ ಅಮೃತ ಸರೋವರ­ದಲ್ಲೂ ಶಿವಲಿಂಗ ದರ್ಶನಕ್ಕಾಗಿ ಭಕ್ತರು ಧಾವಿಸುತ್ತಿದ್ದಾರೆ. ಇಡೀ ದಿನ ದರ್ಶನಕ್ಕೆ ಅನುಕೂಲ ಮಾಡಿಕೊಡು­ವುದಾಗಿ ಪ್ರಜಾಪಿತ ಬ್ರಹ್ಮಕುಮಾರಿ ಮಹಾವಿದ್ಯಾಲಯದ ಪದಾಧಿಕಾರಿ­ಗಳು ತಿಳಿಸಿದ್ದಾರೆ.ಕೈಲಾಸ ನಗರದ ಕೈಲಾಸನಾಥ ದೇವಸ್ಥಾನ, ಗೋದುತಾಯಿ ನಗರದ ಶಿವಮಂದಿರ, ಆದರ್ಶ ನಗರದ ಮಲ್ಲಿ­ಕಾರ್ಜುನ ದೇವಸ್ಥಾನ, ಉಪಳಾಂವ ಕ್ರಾಸ್‌ನಲ್ಲಿ ಶಿವಮೂರ್ತಿ ಸೇರಿದಂತೆ ಅನೇಕ ಕಡೆ ವಿಶೇಷ ಪೂಜೆಗಳು ನಡೆಯಲಿವೆ. ಮಹಾಶಿವರಾತ್ರಿ ಅಂಗವಾಗಿ ಶರಣ ಬಸವೇಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುವರು. ಮಹಾಶಿವರಾತ್ರಿ­ಯಂದು ಮಾತಾ ಮಾಣಿಕೇಶ್ವರಿ ದರ್ಶನ ಪಡೆಯುವುದಕ್ಕಾಗಿ ಯಾನಾ­ಗುಂದಿ ಕಡೆಗೂ ಗುರುವಾರ ಹಾಗೂ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಲಿದ್ದಾರೆ.ಭಕ್ತರು ಗುರುವಾರ ಇಡೀ ದಿನ ಉಪವಾಸ ಮಾಡಿ, ರಾತ್ರಿಯಿಡಿ ಜಾಗರಣೆಯೊಂದಿಗೆ ಶಿವನನ್ನು ಆರಾಧಿಸುವರು. ಶುಕ್ರವಾರ ಬೆಳಿಗ್ಗೆ ಉಪವಾಸ ವ್ರತ ಅಂತ್ಯಗೊಳಿಸುವುದು ಸಂಪ್ರದಾಯ. ಜಾಗರಣೆಗಾಗಿ ಕೆಲವು ಕಡೆಗಳಲ್ಲಿ ಭಜನೆ ಹಾಗೂ ಇನ್ನಿತರ ಸಂಗೀತ ಕಾರ್ಯಕ್ರಗಳನ್ನು ಆಯೋಜಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.