ಮಂಗಳವಾರ, ಜೂನ್ 15, 2021
24 °C

‘ಉದ್ಯೋಗಾವಕಾಶ ವೃದ್ಧಿಗೆ ಎನ್‌ಬಿಎ ನೆರವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶ ವೃದ್ಧಿಸಿಕೊಳ್ಳಲು ಎನ್‌ಬಿಎ ನವದೆಹಲಿಯ ನಿಯಮಗಳನ್ನು ಎಲ್ಲ ತಾಂತ್ರಿಕ ಮಹಾವಿದ್ಯಾಲಯಗಳು ಅಳವಡಿಸಿಕೊಳ್ಳ ಬೇಕು ಎಂದು ಪ್ರಾದೇಶಿಕ ಕೇಂದ್ರದ ವಿಶೇಷಾಧಿಕಾರಿ ಡಾ.ಪ್ರವೀಣ ವಿ.ಹೋನಗುಂಟಿಕರ್‌ ಕರೆ ನೀಡಿದರು.ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ನ್ಯಾಷನಲ್‌ ಬೋರ್ಡ್ ಆಫ್‌ ಆಕ್ರಿಡಿ ಟೇಷನ್‌ ಆಶ್ರಯದಲ್ಲಿ ಬುಧವಾರ ನಡೆದ ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದರು.ತುಮಕೂರಿನ ಎಸ್‌ಐಟಿ ಡಾ.ಯು.ಎಸ್‌. ಮಲ್ಲಿಕಾರ್ಜುನ ಮಾತನಾಡಿದರು. ಪ್ರೊ.ಯಶವಂತ ರಾಯ ಅಷ್ಟಗಿ, ಡಾ.ಶುಭಾಂಗಿ ಪಾಟೀಲ, ಡಾ.ಎಂ.ಎ.ವಾಹೀದ್‌, ಡಾ.ಬಿ.ಶಂಭುಲಿಂಗಪ್ಪ, ಡಾ.ಸಂಧ್ಯಾ, ಡಾ.ವಿ.ಎಂ.ಕುಲಕರ್ಣಿ, ಪ್ರೊ.ಮೇಘನಾ ರಾಣಿ, ಪ್ರೊ.ಕೈಲಾಶ್‌, ಪ್ರೊ.ವಿರೇಶ ಪೂಜಾರಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.